×
Ad

ಮಡಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್ ಮೇಮು ಎಕ್ಸ್‌ಪ್ರೆಸ್‌ಗೆ 2 ಹೆಚ್ಚುವರಿ ನಿಲುಗಡೆ

Update: 2025-07-21 21:48 IST

ಉಡುಪಿ: ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ದೈನಂದಿನ ರೈಲು ನಂ.10107/10108 ಮಡಗಾಂವ್ ಜಂಕ್ಷನ್ - ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ಮೇಮು ಎಕ್ಸ್‌ಪ್ರೆಸ್ ರೈಲಿಗೆ ಪ್ರಾಯೋಗಿಕ ನೆಲೆಯಲ್ಲಿ ಎರಡು ಹೆಚ್ಚುವರಿ ನಿಲುಗಡೆ ನೀಡಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ.

ಜು.22ರಿಂದ ಮೇಮು ರೈಲಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕಾರವಾರ ಸಮೀಪದ ಹರ್ವಾಡ ಹಾಗೂ ಕುಮಟ ಸಮೀಪವಿರುವ ಮಿರ್ಜಾನ್‌ನಲ್ಲಿ ನಿಲುಗಡೆ ಇರುತ್ತದೆ. ಬೆಳಗ್ಗೆ ಮಡಗಾಂವ್‌ನಿಂದ ಬರುವಾಗ (10107) ಹರ್ವಾಡದಲ್ಲಿ ಮುಂಜಾನೆ 5:52ರಿಂದ 5:53ರವರೆಗೆ ಹಾಗೂ ಮಿರ್ಜಾನದಲ್ಲಿ 6:40ರಿಂದ 6:41ರವರೆಗೆ ನಿಲುಗಡೆ ಇರುತ್ತದೆ.

ಅದೇ ರೀತಿ ಸಂಜೆ ಮಂಗಳೂರಿನಿಂದ ಬರುವಾರ ಮಿರ್ಜಾನದಲ್ಲಿ 7:36ರಿಂದ 7:37ರವರೆಗೆ ಹಾಗೂ ಹರ್ವಾಡದಲ್ಲಿ 8:14ರಿಂದ 8:15ರವರೆಗೆ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ನಿಗಮದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News