×
Ad

ಕುಂದಾಪುರ: ಜು.20ಕ್ಕೆ ಲಗೋರಿ- ಗ್ರಾಮೀಣ ಕ್ರೀಡಾ ಸಡಗರ

Update: 2025-06-23 19:44 IST

ಕುಂದಾಪುರ, ಜೂ.23: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಅಂಗವಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ನಡೆಯುವ ಲಗೋರಿ ಗ್ರಾಮೀಣ ಕ್ರೀಡಾಕೂಟದ ಪೂರ್ವಭಾವಿ ತಯಾರಿ ಸಭೆ ಕಲಾಕ್ಷೇತ್ರ ಕಛೇರಿಯ ಪ್ರಕಾಶಾಂಗಣದಲ್ಲಿ ಜರಗಿತು.

ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ಕುರಿತು ದೈಹಿಕ ಶಿಕ್ಷಕರಾದ ಅರುಣ್ ಶೆಟ್ಟಿ, ಚಂದ್ರ ಶೇಖರ ಬೀಜಾಡಿ, ರಾಜಕೀಯ ಮುಂದಾಳು ವಿಕಾಸ್ ಹೆಗ್ಡೆ, ಕಸಾಪದ ಸುಬ್ರಹ್ಮಣ್ಯ ಶೆಟ್ಟಿ, ಲಯನ್ಸ್ ಪ್ರಮುಖರಾದ ರಾಜೀವ ಕೋಟ್ಯಾನ್, ರಮಾನಂದ ಗಾಣಿಗ ಮತ್ತು ಕ್ರೀಡಾಪಟು ಪ್ರದೀಪ್‌ಚಂದ್ರ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಜು.20ರಂದು ಕುಂದಾಪುರ ಬೋರ್ಡ್ ಹೈಸ್ಕೂಲಿನ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಈ ಕ್ರೀಡಾಕೂಟವು ಆರಂಭವಾಗಲಿದೆ. ಕಳೆದ ವರ್ಷ ನಡೆದಿದ್ದ ಈ ಕಾರ್ಯಕ್ರಮವು ಅತ್ಯಂತ ಯಶಸ್ಸನ್ನು ಕಂಡ ಹಿನ್ನೆಲೆಯಲ್ಲಿ ಈ ಬಾರಿ ಮತ್ತೊಮ್ಮೆ ಆಯೋಜಿಸಬೇಕು ಎಂಬುದು ಸಂಸ್ಥೆಯ ಬಯಕೆಯಾಗಿದೆ. ಈ ಕ್ರೀಡಾಕೂಟವು ಯಾವ ಕ್ರೀಡೆಗಳನ್ನು ಒಳಗೊಂಡಿದೆ ಹಾಗೂ ಅದರ ವಿವಿರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದರು.

ಈ ಸಂದರ್ದಲ್ಲಿ ಕಲಾಕ್ಷೇತ್ರ ಸಂಸ್ಥೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕ್ರೀಡಾಪಟು ಗಳು, ರಾಜಕೀಯ ಧುರೀಣರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News