ಸೈಬರ್ ಖದೀಮರಿಂದ 2.84 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2025-05-20 21:37 IST
ಬ್ರಹ್ಮಾವರ, ಮೇ 20: ಸೈಬರ್ ಅಪರಾಧಿಗಳು ಟ್ರೇಡಿಂಗ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ(30) ಎಂಬವರಿಗೆ ಸೈಬರ್ ಅಪರಾಧಿಗಳು ಟ್ರೇಡಿಂಗ್ ಆ್ಯಪ್ ಮೂಲಕ ವಾಟ್ಸಾಪ್ ಗ್ರೂಪಿನಲ್ಲಿ ವ್ಯವಹಾರ ಮಾಡಿ, ಗೂಗಲ್ ಪೇನಿಂದ ಕ್ಯೂ ಆರ್ ಕೋಡ್ ಕಳುಹಿಸಿದ್ದರು. ಇದಕ್ಕೆ ಪ್ರಶಾಂತ್ ಹಂತ ಹಂತ ವಾಗಿ ಒಟ್ಟು 2,84,600ರೂ. ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿ ರುವುದಾಗಿ ದೂರಲಾಗಿದೆ.