ಜುಲೈ 30ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಉಡುಪಿಗೆ ಭೇಟಿ
Update: 2025-07-29 20:55 IST
ಉಡುಪಿ, ಜು.29: ಕರ್ನಾಟಕ ಸರಕಾರದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜುಲೈ 30ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಹಾನಿ ಹಾಗೂ ಭೂಕುಸಿತದ ಪ್ರದೇಶಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಬುಧವಾರ ಅಪರಾಹ್ನ 12:30ರಿಂದ 2:00 ಗಂಟೆಯವರೆಗೆ ಮೂಳೂರು ಸೇರಿದಂತೆ ಜಿಲ್ಲೆಯ ಮಳೆಹಾನಿ ಹಾಗೂ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಚಿವರು ಅಪರಾಹ್ನ 2:00ರಿಂದ ಸಂಜೆ 5:30 ರವರೆಗೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು. ಬಳಿಕ ಅವರು ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.