×
Ad

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: 8 ಮಂದಿ ಸೆರೆ

Update: 2025-03-14 19:52 IST

ಹೆಬ್ರಿ, ಮಾ.14: ಬಡಾಗುಡ್ಡೆ ಹೋಗುವ ದಾರಿ ಬಳಿ ಮಾ.13ರಂದು ಸಂಜೆ ವೇಳೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಎಂಟು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ 7-8 ಜನರು ಸೇರಿಕೊಂಡು ಪರಸ್ಪರ ಬೈದಾಡಿ ಹೊಡೆದಾಡಿಕೊಂಡು ಸಾರ್ವಜನಿ ಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಮಾಹಿತಿಯಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹನುಮಂತ, ಸುರೇಶ್, ರೇಖಾ, ರಮೇಶ, ಮಂಜುನಾಥ, ದುರ್ಗೇಶ್, ಹನುಮಂತ, ವಿಶ್ವನಾಥ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News