×
Ad

ಜ.1ರಿಂದ ಬಾಳಿಗಾ ಆಸ್ಪತ್ರೆಯಲ್ಲಿ ಮದ್ಯವ್ಯಸನ ವಿಮುಕ್ತಿ ಶಿಬಿರ

Update: 2023-12-08 22:13 IST

ಉಡುಪಿ, ಡಿ.8: ಪ್ರತೀ ವರ್ಷದಂತೆ ಈ ವರ್ಷಾರಂಭದಲ್ಲಿಯೂ ಸಹ 32ನೇ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಜನವರಿ 1ರಿಂದ 10ರವರೆಗೆ ಒಟ್ಟು 10 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಹಾಗೂ ಶಿಬಿರದ ಸಂಯೋಜಕ ಡಾ.ಪಿ.ವೆಂಕಟರಾಯ ಭಂಡಾರಿ ತಿಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಮಾನಸಿಕ ಆರೋಗ್ಯ, ಮದ್ಯವ್ಯಸನ ವಿಮುಕ್ತಿ, ಮಕ್ಕಳ ಮಾರ್ಗದರ್ಶನ ಕ್ಷೇತ್ರದಲ್ಲಿ ಸಮುದಾಯದ ಹಿತವನ್ನೇ ಮುಖ್ಯವಾಗಿಟ್ಟುಕೊಂಡು ಜನಸಾಮಾನ್ಯರ ಕೈಗೆಟುವ ದರದಲ್ಲಿ ಜನಸ್ನೇಹಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಮುಂಬಯಿ ಡಾ.ಎ.ವಿ.ಬಾಳಿಗಾ ಚ್ಯಾರಿಟೀಸ್ ಇದನ್ನು ನಡೆಸಿಕೊಡುತ್ತಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ 20 ವರ್ಷಗಳನ್ನು ಪೂರೈಸುತ್ತಿದೆ. ಆಸಕ್ತ ದಾನಿಗಳು ನಮ್ಮ ಕಾರ್ಯದೊಡನೆ ಕೈಜೋಡಿಸಬಹುದು.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಪರ್ಕ ಸಂಖ್ಯೆ: 9242821215, 2535299, 2535399ನ್ನು ಸಂಪರ್ಕಿಸಬಹುದು ಎಂದು ಖ್ಯಾತ ಮನೋವೈದ್ಯರೂ ಆಗಿರುವ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News