×
Ad

ಫೆ.10ರಂದು ಕೃಷಿಕೂಲಿಕಾರರ ವಿಧಾನಸೌಧ ಚಲೋ

Update: 2025-02-08 20:43 IST

ಉಡುಪಿ, ಫೆ.8: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಜಂಟಿಯಾಗಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಫೆ.10ರಂದು ವಿಧಾನಸೌಧ ಚಲೋ ಹಾಗೂ ಅನಿರ್ದಿಷ್ಟವಾದಿ ಧರಣಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆಸಲಿದೆ

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸರಳಬೇಟ್ಟು ಗ್ರಾಮದಲ್ಲಿ ಎ+2 ನೀವೇಶನ ಈಗಾಗಲೇ 400ಕ್ಕೂ ಮಿಕ್ಕಿ ಮನೆ ನಿರ್ಮಾಣವಾಗಿದ್ದು ಅಂಗನವಾಡಿ, ಆಟದ ಮೈದಾನ, ಸಮರ್ಪಕವಾಗಿ ಕಡಿಯುವ ನೀರು, ರಸ್ತೆ ನಿರ್ಮಾಣ, ಬಾಕಿ ಇದ್ದು ಕೂಡಲೇ ಸರಕಾರ ಮುಂದಾಗಬೇಕು. ಉಡುಪಿ ಜಿಲ್ಲೆಯಲ್ಲಿ ಗಾಪಂ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ನೀವೇಶನಕ್ಕೆ ಅರ್ಜಿ ಹಾಕ್ಕಿದ್ದು, ಸರಕಾರಿ ಜಾಗ ಗುರುತಿಸಿ ಸಮರ್ಪಕವಾಗಿ ನೀವೇಶನ ಇಲ್ಲದವರಿಗೆ ಹಂಚಬೇಕು. ಈ ಕಾರ್ಯ ಕ್ರಮದಲ್ಲಿ ಉಡುಪಿ ಜಿಲ್ಲೆಯ ಕೂಲಿಕಾರರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News