×
Ad

ಅ.17ಕ್ಕೆ ‘ಟೈಮ್ ಪಾಸ್’ ಕನ್ನಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

Update: 2025-09-25 20:15 IST

ಉಡುಪಿ: ಶ್ರೀಚೇತನ ಸರ್ವಿಸಸ್ ಬ್ಯಾನರ್‌ನಡಿ ನಿರ್ಮಾಣ ಗೊಂಡ ‘ಟೈಮ್ ಪಾಸ್’ ಕನ್ನಡ ಸಿನಿಮಾ ಅ.17ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಸಿನೆಮಾದ ನಿರ್ದೇಶಕ ಚೇತನ್ ಜೋಡಿದಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡ ಬೇಕೆಂಬುವುದು ಟೈಮ್ ಪಾಸ್’ ಸಿನಿಮಾ ತಂಡದ ಉದ್ದೇಶವಾಗಿದೆ. ಇಂದಿನ ಸಮಾಜಕ್ಕೆ ಕನ್ನಡಿ ಹಿಡಿದಂತಿರುವ ಕಥೆ ಈ ಚಿತ್ರದಲ್ಲಿ ಇರಲಿದೆ. ಟೀಸರ್ ನೋಡಿದ ಬಳಿಕ ಸಿನಿಪ್ರಿಯರಿಗೆ ಟೈಮ್ ಪಾಸ್’ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ ಎಂದರು.

ಪ್ರತಿಷ್ಠಿತ ಸರೆಗಮ ಕನ್ನಡ’ ಆಡಿಯೋ ಕಂಪನಿ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಅದರ ಯೂ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡುಗಳು ಲಭ್ಯವಿದೆ. ಡಾರ್ಕ್ ಹೂಮರ್ ಜನರಿಗೆ ಸೇರಿಕೊಳ್ಳುವ ಈ ಚಿತ್ರವನ್ನು ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಎಚ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ಇಮ್ರಾನ್ ಪಾಷಾ, ರತ್ಷಾರಾಮ್, ವೈಸಿರಿ ಕೆ.ಗೌಡ, ಕೆ. ಚೇತನ್ ಜೋಡಿದಾರ್, ಓಂ ಶ್ರೀಯಕ್ಷಶಿಫ್, ನವೀನ್ ಕುಮಾರ್, ಪ್ರಭಾಕರ್ ರಾವ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಗಿರೀಶ್ ಗೌಡ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ವೈಷ್ಣವಿ ಸತ್ಯನಾರಾಯಣ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಜೀವ್ ಗಣೇಶ್ ಅವರು ಛಾಯಾಗ್ರಹಣ ಹಾಗೂ ಹರಿ ಪರಮ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಡಿ.ಎಂ. ಉದಯ ಕುರ್ಮಾ ಅವರು ಸಂಗೀತ ನೀಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನೃತ್ಯ ನಿರ್ದೇಶಕಿ ವೈಷ್ಣವಿ ಸತ್ಯನಾರಾಯಣ, ನಟರಾದ ರತ್ಷಾರಾಮ್, ಓಂಶ್ರೀ ಯಕ್ಷಶಿಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News