×
Ad

20 ವರ್ಷಗಳ ಹಳೆ ಪ್ರಕರಣದ ಆರೋಪಿ ಬಂಧನ

Update: 2025-02-18 21:13 IST

ಮಲ್ಪೆ, ಫೆ.18: ಮಲ್ಪೆ ಬಂದರಿನಲ್ಲಿ ಎರಡು ಬೊಟುಗಳಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ 20ವರ್ಷಗಳಿಂದ ತಲೆಮರೆಸಿ ಕೊಂಡಿದ್ದ ಆರೋಪಿ ತಮಿಳುನಾಡಿನ ಶಾಂತಿ ಯೋಗರಾಜ್ ಎಂಬಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಉಡುಪಿ ನ್ಯಾಯಾಲಯಕ್ಕೆ ಸುಮಾರು 20 ವರ್ಷಗಳಿಂದ ಹಾಜರಾಗದೆ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಮಲ್ಪೆಪೊಲೀಸ್ ಠಾಣಾ ಸಿಬ್ಬಂದಿ ಹೆಡ್‌ಕಾನ್ಸ್ಟೇಬಲ್ ಸುರೇಶ್ ಕುಮಾರ್ ಮತ್ತು ವಿಶ್ವನಾಥ ಎಚ್. ತಮಿಳುನಾಡಿನ ತಿರುನನ್ವೆಲ್ ಜಿಲ್ಲೆಯ ಇಡಂದಕರೈ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯವು ಆರೋಪಿಗೆ ದಂಡ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News