×
Ad

ನ.26: ಉಡುಪಿ ಧರ್ಮಪ್ರಾಂತದ ಪರಮ ಪ್ರಸಾದ ಮೆರವಣಿಗೆ

Update: 2023-11-24 19:23 IST

ಉಡುಪಿ, ನ.24: ಉಡುಪಿ ಕೆಥೊಲಿಕ್ ಧರ್ಮಪ್ರಾಂತದ ವಾರ್ಷಿಕ ಪರಮಪ್ರಸಾದದ ಮೆರವಣಿಗೆ ನವೆಂಬರ್ 26ರಂದು ರವಿವಾರ ಅಪರಾಹ್ನ 3:00 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ನಡೆಯಲಿದೆ.

ಗಂಗೊಳ್ಳಿಚರ್ಚ್‌ನ ಧರ್ಮಗುರು ವಂ.ರೋಶನ್ ಥೋಮಸ್ ಡಿ’ಸೋಜರ ನೇತೃತ್ವದಲ್ಲಿ ಜಪಸರ ಪ್ರಾರ್ಥನೆ, ಬಳಿಕ 3:30ಕ್ಕೆ ಧರ್ಮಾಧ್ಯಕ್ಷ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಜರಗಲಿದೆ. ಬಳಿಕ ಮಿಲಾಗ್ರಿಸ್ ಚರ್ಚಿನಿಂದ ಆರಂಭಗೊಂಡು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ತನಕ ತೆರೆದ ವಾಹನದಲ್ಲಿ ಪರಮ ಪ್ರಸಾದವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕ ಗೌರವ ಸಲ್ಲಿಸಲಾಗುವುದು.

ಮೌಂಟ್ ರೋಸರಿ ಚರ್ಚ್ ವಠಾರದಲ್ಲಸಿ ಉದ್ಯಾವರದ ಸಹಾಯಕ ಧರ್ಮಗುರು ವಂ. ಲಿಯೊ ಪ್ರವೀಣ್ ಡಿ’ಸೋಜಾರ ನೇತೃತ್ವದಲ್ಲಿ ಪ್ರವಚನ ನಡೆಯಲಿದ್ದು, ಧರ್ಮಾಧ್ಯಕ್ಷರು ಪರಮ ಪ್ರಸಾದ ಆಶೀರ್ವಚನ ನೆರವೇರಿಸಲಿ ದ್ದಾರೆ. ಇದೇ ವೇಳೆ2024ನೇ ವರ್ಷದ ಸಂಭ್ರಮಕ್ಕೆ ಧರ್ಮಪ್ರಾಂತದ ಮಟ್ಟದ ಆಚರಣೆಗೆ ಧರ್ಮಾಧ್ಯಕ್ಷರು ಚಾಲನೆ ನೀಡಲಿದ್ದಾರೆ.

ಧರ್ಮಪ್ರಾಂತದ ಸುಮಾರು 50ಕ್ಕೂ ಅಧಿಕ ಧರ್ಮಗುರುಗಳು ಮತ್ತು 3000ಕ್ಕೂ ಅಧಿಕ ಕ್ರೈಸ್ತ ಭಾಂಧವರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News