×
Ad

ಡಿ.29-30 ‘ಉಡುಪಿ ಅಟೋ ಎಕ್ಸ್‌ಪೋ-2023’

Update: 2023-12-19 21:59 IST

ಉಡುಪಿ: ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶ-ವಿದೇಶಗಳ ವಿವಿಧ ಪ್ರಮುಖ ಕಂಪೆನಿಗಳ ದ್ವಿಚಕ್ರ ವಾಹನದಿಂದ ಘನ ವಾಹನಗಳ ಪ್ರದರ್ಶನ ಹಾಗೂ ಮಾರಾಟ, ಬಿಡಿಭಾಗಗಳ ಪ್ರದರ್ಶನ ಮೇಳ ‘ಉಡುಪಿ ಅಟೋ ಎಕ್ಸ್‌ಪೋ-2023’ ಡಿ.29 ಹಾಗೂ 30ರಂದು ಉಡುಪಿ ಎಂಜಿಎಂ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಅಟೋಮೊಬೈಲ್ ಡೀಲರ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಕಾಶೀನಾಥ್ ನಾಯಕ್ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಉಡುಪಿ ಜಿಲ್ಲಾ ಅಟೋ ಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಹಾಗೂ ಉಡುಪಿ ಚೇಂಬರ್ ಆಫ್ ಕಾರ್ಮ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ಎರಡು ದಿನಗಳ ಈ ಮೇಳ ನಡೆಯಲಿದೆ ಎಂದರು.

ಅಟೋ ಎಕ್ಸ್‌ಪೋದಲ್ಲಿ ವಿವಿಧ ಕಂಪೆನಿಗಳ ದ್ವಿಚಕ್ರ, ತಿಚಕ್ರ, ಕಾರು, ಜೀಪು, ಟೆಂಪೊ, ಬಸ್, ಲಾರಿ ಹಾಗೂ ಎಲ್ಲಾ ಮಾದರಿಯ ಎಲೆಕ್ಟ್ರಿಕ್ ಹಾಗೂ ಸಿಎನ್‌ಜಿ ವಾಹನಗಳ ಪ್ರದರ್ಶನ ನಡೆಯಲಿದೆ. ಸ್ಥಳದಲ್ಲೇ ಬುಕ್ಕಿಂಗ್‌ಗೂ ಅವಕಾಶವಿದ್ದು, ಕಂಪೆನಿಗಳಿಂದ ವಿಶೇಷ ಆಫರ್‌ಗಳು ಸಿಗಲಿವೆ. ಅಗತ್ಯವಿದ್ದರೆ ಬ್ಯಾಂಕ್ ಸಾಲ ಸೌಲಭ್ಯವನ್ನೂ ಸ್ಥಳದಲ್ಲೇ ಒದಗಿಸಲಾಗು ವುದು ಎಂದು ಕಾಶೀನಾಥ್ ನಾಯಕ್ ತಿಳಿಸಿದರು.

ಬೆಂಝ್, ಬಿಎಂಡಬ್ಲ್ಯು, ಆಡಿ, ಸಿಟ್ರಾನ್, ಸ್ಕೋಡಾ, ಕಿಯಾ, ಎಂಜಿ, ಟೊಯೋಟಾ,ಮಹೀಂದ್ರ, ಹುಂಡೈ, ಮಾರುತಿ ಸುಜುಕಿ, ವೋಕ್ಸ್‌ವಾಗನ್, ಟಾಟಾ ಎಚ್‌ಸಿವಿ, ಲೈಲ್ಯಾಂಡ್, ಈಷರ್, ಭಾರತ್ ಬೆಂಝ್, ಹೋಂಡಾ ಕಂಪೆನಿಗಳ ವಾಹನಗಳ ಪ್ರದರ್ಶನವಿರುತ್ತದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ಟಿವಿಎಸ್. ಸುಝುಕಿ, ಹೀರೋ, ಹೋಂಡಾ, ಬಜಾಜ್, ಯಮಹಾ, ಎನ್‌ಫೀಲ್ಡ್, ಟಿವಿಎಸ್. ಬಜಾಜ್ ಮುಂತಾದ ಕಂಪೆನಿಗಳ ಮಾಹನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಅಲ್ಲದೇ ಬಿಎಸ್‌6 ವಾನಹಗಳ ಬಗ್ಗೆ ಕಂಪೆನಿ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಗ್ರಾಹಕರು ಹಾಗೂ ಗ್ಯಾರೇಜ್‌ಗಳ ಮೆಕ್ಯಾನಿಕ್‌ಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಲ್ಲದೇ ಭಾಗವಹಿಸುವ ಎಲ್ಲರಿಗೂ ಆಯೋಜಕರ ವತಿಯಿಂದ ಅದೃಷ್ಟ ಕೂಪನ್‌ಗಳನ್ನು ನೀಡಲಾಗುತಿದ್ದು, ಡ್ರಾ ವಿಜೇತರಿಗೆ ಆಕರ್ಷಕ ಬಹುಮಾನ ಗಳಿರುತ್ತದೆ ಎಂದು ನಾಯಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಅಟೋ ಕ್ಲಬ್‌ನ ಸ್ಥಾಪಕಅಧ್ಯಕ್ಷ ಡಾ. ನಿಶಾಂತ್ ಭಟ್, ಅಸೋಸಿಯೇಷನ್‌ನ ಮ್ಯಾಕ್ಸಿಮ್ ಡಿಸೋಜ, ವಲೇರಿಯನ್ ಫೆರ್ನಾಂಡೀಸ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News