ಎಂದಿಗೂ ಖುಷಿಯಾಗಿರುವುದೇ ನಿಜವಾದ ಯಶಸ್ಸು: ಯಂಡಮೂರಿ
ಉಡುಪಿ, ಅ.30: ಬೇರೆಯವರಿಗೆ ತೊಂದರೆ ಕೊಡದೆ ಯಾವಾಗಲೂ ಸಂತೋಷವಾಗಿರುವುದೇ ನಿಜವಾದ ಯಶಸ್ವಿಯಾ ಗಿದೆ ಎಂದು ಲೇಖಕ, ಪ್ರೇರಣಾ ಭಾಷಣಕಾರ ಯಂಡಮೂರಿ ವೀರೇಂದ್ರನಾಥ್ ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಹರ್ಷ ಉಡುಪಿ ಹಾಗೂ ಕಮಲ್ ಎ.ಬಾಳಿಗ ಚಾರಿ ಟೇಬಲ್ ಟ್ರಸ್ಟ್‌ನ ಸಹಕಾರದೊಂದಿಗೆ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸ ಲಾದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ವಿಜಯಕ್ಕೆ ಐದು ಮೆಟ್ಟಿಲು ವಿಷಯದ ಕುರಿತು ಮಾತನಾಡಿದರು.
ಆರೋಗ್ಯ ಉತ್ತಮವಾಗಿರದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಆದು ದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಲು ನಿದ್ರೆ ಮತ್ತು ಆಹಾರದ ನಿಯಂತ್ರಣ ಅಗತ್ಯವಾಗಿದೆ. ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದೇ ಆತ್ಮಾನಂದ ಕೊಡುತ್ತದೆ. ಆರೋಗ್ಯ, ಖ್ಯಾತಿ, ಪ್ರೀತಿ, ಸಂಪತ್ತು, ಉತ್ಸಾಹ ಹಾಗೂ ಬುದ್ದಿವಂತಿಕೆ ಮನುಷ್ಯ ನಿಜವಾದ ಐಶ್ವರ್ಯವಾಗಿದೆ ಎಂದರು.
ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ ರೂಬಿಕ್ಸ್ ಕ್ಯೂಬ್‌ನಿಂದ ಇಂಟರ್ನೆಟ್ ವ್ಯಸನಮುಕ್ತಿ ಎಂಬ ವಿಷಯದ ಕುರಿತು ಉಪ ನ್ಯಾಸ ನೀಡಿ, ಪಾತ್ಯಕ್ಷಿಕೆ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶ್ವನಾಥ ಶೆಣೈ, ಹರ್ಷ ಸಂಸ್ಥೆಯ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಕೆ. ಉಪಸ್ಥಿತರಿದ್ದರು.
ಆಸ್ಪತ್ರೆಯ ನಿರ್ದೇಶಕ ಹಾಗೂ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಸ್ವಾಗತಿಸಿದರು. ಮನೋ ವೈದ್ಯ ಡಾ.ವಿರೂಪಾಕ್ಷ ದೇವರುಮನೆ ಅತಿಥಿಗಳನ್ನು ಪರಿಚಯಿಸಿದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ವಂದಿಸಿದರು. ಸೌಜನ್ಯ ಶೆಟ್ಟಿ ಹಾಗೂ ವಿದ್ಯಾಶ್ರೀ ಎಂ.ಎಸ್. ಕಾರ್ಯಕ್ರಮ ನಿರೂಪಿಸಿದರು.