ಬೆಳ್ವೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಕುಂದಾಪುರ, ಸೆ.24: ಗ್ರಾಮೀಣ ಭಾಗದ ಯುವಕರು ಸಂಘಟಿತರಾಗುವ ಮೂಲಕ ಸಮುದಾಯದ ಬಲವರ್ಧನೆಗೆ ಕಠಿಬದ್ಧರಾಗಬೇಕು. ಶ್ರೀನಾರಾಯಣ ಗುರುಗಳ ಸಂದೇಶದಂತೆ ಸಂಘಟನೆಯೊಂದಿಗೆ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವಲಯ ಇದರ ವತಿಯಿಂದ ಶ್ರೀಬ್ರಹ್ಮ ಬೈದರ್ಕಳ ಗರಡಿ ಕೆರ್ಜಾಡಿಯಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಬೆಳ್ವೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಜೀವ ಪೂಜಾರಿ ಶೇಡಿಮನೆ ವಹಿಸಿದ್ದರು. ವಲಯ ತರಬೇತುದಾರ, ಜೆಸಿಐ ಹೆಬ್ರಿಯ ಪೂರ್ವ ಅಧ್ಯಕ್ಷ ಪ್ರಕಾಶ್ ಪೂಜಾರಿ ಗುರುತತ್ವ ಸಂದೇಶ ನೀಡಿದರು.
ಉದ್ಯಮಿ ಕೃಷ್ಣ ಪೂಜಾರಿ ಅಮಾಸೆಬೈಲು, ಗರಡಿ ಅಧ್ಯಕ್ಷ ಜಯಂತ ಹೆಗ್ಡೆ, ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಬೆಳ್ವೆ ಬಿಲ್ಲವ ಸಂಘದ ಕಾರ್ಯದರ್ಶಿ ಉದಯ್ ಪೂಜಾರಿ ಶಾಂದ್ರಬೆಟ್ಟು, ಸಂಘದ ಗೌರವ ಸಲಹೆಗಾರ ಬಿ.ಉದಯಕುಮಾರ್ ಪೂಜಾರಿ ಬೆಳ್ವೆ ಉಪಸ್ಥಿತರಿದ್ದರು.
ಇದೇ ವೇಳೆ ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಡಾ.ಸಿಂಚನ್ ಹಾಗೂ ನಾಟಿ ವೈದ್ಯ ರಾಜು ಕೊಠಾರಿ ಅವರನ್ನು ಸನ್ಮಾನಿಸ ಲಾಯಿತು. ಸುಧಾಕರ್ ಪೂಜಾರಿ ಪಾಟ್ಲಮಕ್ಕಿ ಸ್ವಾಗತಿಸಿ, ಆನಂದ ಪೂಜಾರಿ ಜಟ್ಟಿನಹಾಡಿ ವಂದಿಸಿದರು. ಗಣೇಶ ಅರಸಮ್ಮನಕಾನು ಕಾರ್ಯಕ್ರಮ ನಿರೂಪಿಸಿದರು.