×
Ad

ಉಡುಪಿ ಡಿಸಿ ಕಚೇರಿ ರಸ್ತೆಯಲ್ಲೇ ಅಪಾಯಕಾರಿ ಸ್ಟಂಟ್ !

Update: 2023-08-02 21:25 IST

ಉಡುಪಿ, ಆ.2: ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಯುವಕರಿಬ್ಬರು ಅಪಾಯಕಾರಿ ರೀತಿಯಲ್ಲಿ ಸ್ಕೂಟರ್ ಸ್ಟಂಟ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಇಬ್ಬರು ಯುವಕರು ಸ್ಕೂಟರ್‌ನಲ್ಲಿ ಸ್ಟಂಟ್ ಮಾಡುತ್ತಿದ್ದು, ಇತರ ವಾಹನಗಳಿಗೆ ಅಪಾಯ ಆಗುವ ರೀತಿಯಲ್ಲಿ ಸ್ಕೂಟರ್‌ನ್ನು ಅಡ್ಡಾದಿಡ್ಡಿ ಯಾಗಿ ಸವಾರಿ ಮಾಡಿರುವುದು ಕಂಡುಬಂದಿದೆ. ಈ ಅಪಾಯಕಾರಿ ರೀತಿಯ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ಇದೀಗ ಪೊಲೀಸರ ಗಮನಕ್ಕೂ ಬಂದಿದ್ದು, ಸ್ಕೂಟರ್‌ ಉಡುಪಿ ರಿಜಿಸ್ಟ್ರೇಶನ್ ಆಧಾರದಲ್ಲಿ ಯುವಕನನ್ನು ಪತ್ತೆ ಮಾಡುವ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News