×
Ad

ಮದುವೆ ಹಾಲ್‌ನಲ್ಲಿಯೇ ಕುಸಿದು ಬಿದ್ದು ಮೃತ್ಯು

Update: 2023-11-05 20:45 IST

ಉಡುಪಿ: ಮದುವೆ ಹಾಲ್‌ನಲ್ಲಿಯೇ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.4ರಂದು ಮಧ್ಯಾಹ್ನ ವೇಳೆ ಉಡುಪಿಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡಿನ ಎ.ಎಂ.ಸುಲೇಮಾನ್ ಎಂಬವರ ಮಗ ಹುಮಾಯುನ್ ಸುಲೇಮಾನ್ (45) ಎಂದು ಗುರುತಿಸಲಾಗಿದೆ. ಇವರು 5 ದಿನಗಳ ಹಿಂದೆ ತನ್ನ ಹೆಂಡತಿ ತಮ್ಮನ ಮದುವೆಗೆಂದು ಉಡುಪಿಗೆ ಬಂದಿದ್ದರು. ಕಾರ್ಯಕ್ರಮದ ಹಾಲ್‌ನಲ್ಲಿ ಇವರು ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News