×
Ad

ನ.4ರಂದು ರೋಟರಿ ಬ್ರಹ್ಮಾವರದ ಸುವರ್ಣ ಸಂಭ್ರಮ

Update: 2023-11-03 21:56 IST

ಉಡುಪಿ, ನ.3: ರೋಟರಿ ಕ್ಲಬ್ ಬ್ರಹ್ಮಾವರ ಪ್ರಾರಂಭಗೊಂಡ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ.4ರ ಶನಿವಾರ ನಡೆಯಲಿದೆ ಎಂದು ರೋಟರಿ ಬ್ರಹ್ಮಾವರದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ, ಅರುಣಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುವರ್ಣ ಮಹೋತ್ಸವ ಸಮಾರಂಭ ಸಂಜೆ 6:00ಗಂಟೆಗೆ ಬ್ರಹ್ಮಾವರದ ಹೊಟೇಲ್ ಆಶ್ರಯದಲ್ಲಿ ನಡೆಯಲಿದೆ. ಇದರ ಅಂಗವಾಗಿ ಉಚಿತ ಮಾಸಿಕ ಮಾನಸಿಕ ಶಿಬಿರ ಬೆಳಗ್ಗೆ 11 ಗಂಟೆಗೆ ರೋಟರಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದರು.

ಇದಕ್ಕಾಗಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆಯೂ ಇದರೊಂದಿಗೆ ನಡೆಯ ಲಿದೆ. ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ.ಎಚ್.ಜೆ.ಗೌರಿ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರೋಟರಿ ಬ್ರಹ್ಮಾವರದ ಅಧ್ಯಕ್ಷ ಉದಯಕುಮಾರ್ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಭಾಸ್ಕರ ರೈ, ಬಿ.ಎಂ.ಭಟ್, ಆರೂರು ತಿಮ್ಮಪ್ಪ ಶೆಟ್ಟಿ, ವಾಲಞ್ಡರ್ ಸಿರಿಲ್ ಪಿಂಟೊ, ಉದಯಕುಮಾರ್ ಶೆಟ್ಟಿ ಉನ್ನತಿ, ಹರೀಶ್ ಕುಂದರ್, ಆಲ್ವಿನ್ ಅಂದ್ರಾದೆ ಮುಂತಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News