×
Ad

ಪಡುಕೋಣೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Update: 2024-01-07 20:22 IST

ಕುಂದಾಪುರ: ಎಲ್.ಜಿ ಫೌಂಡೇಶನ್ ಕುಂದಾಪುರ ಇವರ ವತಿ ಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರ, ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು, ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆ, ಶ್ರೀ ಮಹಾವಿಷ್ಣು ಫ್ರೆಂಡ್ಸ್ ಸರ್ಕಲ್, ಪಡುಕೋಣೆ ಫ್ರೆಂಡ್ಸ್ ಪಡುಕೋಣೆ, ವಿಶ್ವ ದೇವಾಡಿಗ ಮಹಾ ಮಂಡಲ, ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್, ಪಡುಕೋಣೆ ಎಜುಕೇಶನ್ ಸ್ಪೋರ್ಟ್ಸ್ ಪ್ರಮೋಟರ್ಸ್ ನಾಡ, ಜನಶಕ್ತಿ ಸೇವಾ ಟ್ರಸ್ಟ್ ನಾಡ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಪಡುಕೋಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ನಡೆಯಿತು.

ಉದ್ಯಮಿ ಡಾ.ವಿಜಯಕೃಷ್ಣ ಪಡುಕೋಣೆ ಅವರು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿ ಕೊಳ್ಳುವುದು ಎಲ್ಲರಿಗೂ ಅಗತ್ಯವಾಗಿದ್ದು, ಕಾಲ ಕಾಲಕ್ಕೆ ಸೂಕ್ತವಾದ ತಪಾಸಣೆ ಮಾಡಿಕೊಂಡಾಗ ಪ್ರಾಥಮಿಕ ಹಂತದಲ್ಲಿಯೇ ಆರೋಗ್ಯದ ಗುಣಲಕ್ಷಣಗಳನ್ನು ಪತ್ತೆ ಹಚ್ಚಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.

ಎಲ್.ಜಿ.ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ ಡಿ. ಪಡುಕೋಣೆ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬರಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇವೊಂದು ಆರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ. ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗ ಪಡಿಸಿಕೊಂಡು ಜನ ಸೇವಾ ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜನಶಕ್ತಿ ಸೇವಾ ಟ್ರಸ್ಟ್‌ನ ಫಿಲಿಪ್ ಡಿ’ಸಿಲ್ವಾ, ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ, ಆನಗೋಡು ತ್ರಾಸಿ ನಾಟಿ ವೈದ್ಯ ಮಾಕ್ಸಿಮ್ ಓಲಿವೆರಾ, ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ಸ್ಥಾಪಕ ಗಣೇಶ್ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕುಂದಾಪುರ ಉಪವಿಭಾಗೀಯ ಸರಕಾರಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ನಾಗೇಶ್, ದೇವಾಡಿಗ ಅಕ್ಷಯ ಕಿರಣ ಪೌಂಡೇಶನ್ ಎಂ.ಡಿ. ಮಧುಕರ ದೇವಾಡಿಗ, ದೇವಾಡಿಗ ವಿಶ್ವ ಮಹಾ ಮಂಡಲದ ಉಪಾಧ್ಯಕ್ಷ ಡಾ.ದೇವರಾಜ್ ಕೆ., ಪಡುಕೋಣೆ ಎಜುಕೇಶನ್ ಹಾಗೂ ಸ್ಪೋರ್ಟ್ಸ್ ಪ್ರಮೋಟರ್ಸ್ ನಾಡ ಅಧ್ಯಕ್ಷ ಡಾಲ್ಫಿ ಡಿಸಿಲ್ವ, ಪಡುಕೋಣೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ, ಹಿರಿಯ ಸಂಶೋಧನಾ ವಿಜ್ಞಾನಿ ಪೂರ್ಣಿಮಾ ದಯಾನಂದ ದೇವಾಡಿಗ, ನಾಡ ಗ್ರಾಪಂ ಸದಸ್ಯ ಅರವಿಂದ ಪೂಜಾರಿ, ರಘುರಾಮ ದೇವಾಡಿಗ ಆಲೂರು, ಕುಸುಮಾ ನಾಗರಾಜ್ ಪಡುಕೋಣೆ, ಲಚ್ಚು ದೇವಾಡಿಗ, ಮಹೇಶ್ ದೇವಾಡಿಗ ಪಡುಕೋಣೆ, ಗುರು ಕೃತಿಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News