ಕುಂದಾಪುರ| ಅಕ್ರಮ ಕಲ್ಲು ಬಂಡೆ ಸ್ಪೋಟ: ಸ್ವಯಂಪ್ರೇರಿತ ಪ್ರಕರಣ ದಾಖಲು
Update: 2025-01-31 21:54 IST
ಶಂಕರನಾರಾಯಣ: ಹಳ್ಳಿಹೊಳೆ ಗ್ರಾಮದ ಅರಮನೆಕೊಡ್ಲು ಎಂಬಲ್ಲಿ ಜ.31ರಂದು ಬೆಳಗ್ಗೆ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಸ್ಪೋಟಿಸಿದ ಪರಿಣಾಮ ಸುತ್ತುಮುತ್ತಲಿನ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಅನಂತಮೂರ್ತಿ ಭಟ್ ಎಂಬಾತ ತನ್ನ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಕಲ್ಲು ಬಂಡೆಗಳನ್ನು ಸ್ಪೋಟಿಸಿದ್ದು, ಇದರ ಪರಿಣಾಮ ಅಕ್ಕ ಪಕ್ಕದ ಮನೆಗಳಿಗೆ ಹಾನಿ ಉಂಟಾಗಿದೆ. ಈ ಕುರಿತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಸ್ಪೋಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ.
ಅನಂತಮೂರ್ತಿ ಭಟ್ ಇತರರೊಂದಿಗೆ ಸೇರಿ ಅಕ್ರಮವಾಗಿ ಕೆಂಪು ಕಲ್ಲು ಬಂಡೆಗಳನ್ನು ಕಂಪ್ರೆಸರ್ ಮತ್ತು ಸ್ಪೋಟಕ ವಸ್ತುಗಳನ್ನು ಬಳಸಿ, ಸ್ಪೋಟಗೊಳಿಸಿರುವುದು ಕಾನೂನು ಬಾಹಿರ ಕೃತ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.