×
Ad

ಕರ್ನಾಟಕ ಗಂಧದ ಗುಡಿ: ಜಯನ್ ಮಲ್ಪೆ

Update: 2023-11-01 19:45 IST

ಮಲ್ಪೆ, ನ.1: ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಇತಿಹಾಸ ಹೊಂದಿರುವ ನಮ್ಮ ಪಾವನ ಭೂಮಿಯಾದ ಕರ್ನಾಟಕ ನಾಡಿನ ಜನತೆಗೆ ಗಂಧದ ಗುಡಿಯಿದ್ದಂತೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಲಾದ 68ನೇ ಕರ್ನಾಟಕ ರಾಜ್ಯೋತ್ಸವದ ಭುವನೇಶ್ವರಿಯ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯೋತ್ಸವ ಎಂಬುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್ಯಾಸ. ನವೆಂಬರ್ ತಿಂಗಳು ಮುಗಿದ ಬಳಿಕ ನಾಡು ನುಡಿಯ ಕುರಿತು ನಾವು ತಲೆಕೆಡಿಸಿಕೊಳ್ಳುಲು ಹೋಗದಿರುವುದು ದುರಾದೃಷ್ಟಕರ ಎಂದ ಅವರು, ರಾಜ್ಯದಲ್ಲಿ ಕೋಮುಸಾರಸ್ಯ, ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ಮಾತ್ರ ರಾಜ್ಯದ ಹಿತ ರಕ್ಷಣೆ ಸಾದ್ಯ ಎಂದರು.

ಅಧ್ಯಕ್ಷತೆಯನ್ನು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಮಲ್ಪೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ನಗರಸಬಾ ಸದಸ್ಯ ಪಾಡುರಂಗ ಮಲ್ಪೆ, ನ್ಯಾಯವಾದಿ ಪ್ರವೀಣ್ ಪೂಜಾರಿ ಮಾತನಾಡಿದರು. ವೇದಿಕೆಯಲ್ಲಿ ಸಮಾಜ ಸೇವಕ ಹಾಗೂ ಉದ್ಯಮಿ ಮಂಜು ಕೊಳ, ಚಂದ್ರಹಾಸ ಕಾಂಚನ್, ರಘರಾಜ್ ಬಂಗೇರ ಮತ್ತು ಅರುಣ್ ಬಂಗೇರ ಉಪಸ್ಥಿತರಿದ್ದರು.

ಹರೀಶ್ ಸಾಲ್ಯಾನ್ ಸ್ವಾಗತಿಸಿ, ಬಗವಾನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ದಲ್ಲಿ ಪ್ರಾಣರಕ್ಷಕ ಈಶ್ವರ ಮಲ್ಪೆ,ಸುಗಮ ಸಂಚಾರಕ ವಿಶ್ವನಾಥ ಶೆಣೈ ಮತ್ತು ಹಿರಿಯ ರಿಕ್ಷಾ ಚಾಲಕ ಐತಪ್ಪಬಂಗೇರ ಇವರನ್ನು ಸನ್ಮಾನಿಸಲಾಯಿತು.

ಬಳಿಕ ಕನ್ನಡ ಭುವನೇಶ್ವರಿ, ಕುವೆಂಪು, ಪುನೀತ್ ರಾಜ್‌ಕುಮಾರ್ ರವರ ಟ್ಯಾಬ್ಲೋದೊಂದಿಗೆ ಸುಮಾರು 500ಕ್ಕೂ ಹೆಚ್ಚು ರಿಕ್ಷಾಗಳ ಮೆರವಣಿಗೆ ಬೀಚ್ ನಿಂದ ಹೊರಟು ಮಲ್ಪೆಸುತ್ತಮುತ್ತ ಸಾಗಿ ಕಡಲ ಕಿನಾರೆಯಲ್ಲಿ ಸಮಾಪನ ಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News