×
Ad

ಕುಂದಾಪುರ: ಅಕ್ರಮ ಜಾನುವಾರು ಸಾಗಿಸುತ್ತಿದ್ದ ಆರೋಪ; ಓರ್ವ ಸೆರೆ

Update: 2023-07-19 22:13 IST

ರಿಯಾಝ್

ಕುಂದಾಪುರ: ಜಾನುವಾರು ಸಾಗಿಸುತ್ತಿದ್ದ ಆರೋಪಿಯನ್ನು ಕುಂದಾಪುರ ಪ್ರೊಬೆಶನರಿ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಕೋಡಿ ರಸ್ತೆಯಲ್ಲಿ ಬುಧವಾರ ನಡೆದಿದೆ.

ಮೂಡುಗೋಪಾಡಿ ನಿವಾಸಿ ರಿಯಾಝ್(38) ಬಂಧಿತ ಆರೋಪಿ.

ಜು.19ರ ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣಾ ಪ್ರೊಬೇಶನರಿ ಡಿವೈಎಸ್‌ಪಿ ರವಿ ಅವರಿಗೆ ಬೀಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಧಸೂದನ್, ರಾಮ ಪೂಜಾರಿ ಕರೆ ಮಾಡಿ ಕೋಡಿ ರಸ್ತೆಯಲ್ಲಿ ಮಾರುತಿ ಓಮಿನಿ ವಾಹನದಲ್ಲಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು ಕುಂದಾಪುರ ಠಾಣೆ ಪಿಎಸ್ಐ ವಿನಯ ಎಮ್‌ ಕೊರ್ಲಹಳ್ಳಿ ಹಾಗೂ ಹೆಡ್ ಕಾನ್ಸ್‌ಟೇಬಲ್ ಅವಿನಾಶ್, ಸಂತೋಷ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದು ಹಳೆಅಳಿವೆ ಕಡೆಯಿಂದ ಲೈಟ್ ಹೌಸ್ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಿದಾಗ ಹಿಂಸಾತ್ಮಕವಾಗಿ ಕಟ್ಟಿ ಹಾಕಿದ ಜಾನುವಾರು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News