ಮೂಳೂರು: ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಕಾಪು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಇದರ ಅಧೀನದಲ್ಲಿರುವ ಮೂಳೂರು ಅಲ್-ಇಹ್ಸಾನ್ ದಅವಾ ಕಾಲೇಜು ವತಿಯಿಂದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ದಅವಾ ಕಾಲೇಜು ವಿದ್ಯಾರ್ಥಿ ಗಳಿಗೆ ಅಭಿನಂದನಾ ಸಮಾರಂಭವನ್ನು ಸೋಮವಾರ ಆಯೋಜಿಸಲಾಗಿತ್ತು.
ಬೆಂಗಳೂರಿನ ಕೆ.ಎಲ್.ಇ ಕಾನೂನು ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಅಲ್-ಇಹ್ಸಾನ್ ದಅವಾ ಕಾಲೇಜು ವಿದ್ಯಾರ್ಥಿಗಳಾದ ಅಬ್ದುಲ್ ರಹ್ಮಾನ್ ಹಿಶಾಂ ಬಜ್ಪೆ, ಅಹ್ಮದ್ ಸಾಬೀತ್ ಕೃಷ್ಣಾಪುರ, ಮುಹಮ್ಮದ್ ನಿಹಾದ್ ದಾವಣಗೆರೆ, ಅಬ್ದುಲ್ ರಾಫೀಹ್ ಪುತ್ತೂರು, ಅಹ್ಮದ್ ಅಫ್ಳಳ್ ಜಾರಿಗೆಬೈಲ್ ‘ಇಸ್ಲಾಂ ಮತ್ತು ಲಿಂಗ ತಾರತಮ್ಯ’, ‘ಉಗ್ರವಾದ ಎದುರಿಸುವಲ್ಲಿ ಇಸ್ಲಾಮಿನ ಪಾತ್ರ’, ‘ಮಲಬಾರ್ ವಿಧ್ವಾಂಸರ ರಾಜಕೀಯ ವಿಧಾನ’, ‘ಇಸ್ಲಾಂ ಮತ್ತು ಜಾತ್ಯತೀತತೆ’, ‘ಭಾರತೀಯ ಮುಸಲ್ಮಾನರ ಸಮಸ್ಯೆಗಳಿಗೆ ಸಂವಿಧಾನಾತ್ಮಕ ಪರಿಹಾರ’ ಎಂಬ ವಿಷಯಗಳ ಕುರಿತು ಪ್ರಬಂಧ ಮಂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ವ್ಯವಸ್ಥಪಕ ಮುಸ್ತಫ ಸಅದಿ, ಸಹ ವ್ಯವಸ್ಥಾಪಕ ಸಿದ್ದೀಖ್ ಸಅದಿ, ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ.ಬಶೀರ್ ಅಲಿ, ಅಲ್-ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲ ಸ್ವಾಬಿರ್ ಸಅದಿ, ಮುದರ್ರಿಸರಾದ ರಶೀದ್ ಸಅದಿ, ಹಮೀದ್ ಅಹ್ಸನಿ, ಉನೈಸ್ ಅಹ್ಸನಿ, ಮಸ್ರೂರ್ ಸುರೈಜಿ, ಬಾತೀಷ್ ಸಖಾಫಿ, ಮಾಸ್ಟರ್ ಅನೀಸ್ ಉಪಸ್ಥಿತರಿದ್ದರು.