ಮೂಳೂರು: ಅ.13ರಂದು ಡಿಕೆಎಸ್ಸಿ ಡೇ ಪ್ರಯುಕ್ತ ವಿವಿಧ ಕಾರ್ಯಕ್ರಮ
ಉಡುಪಿ, ಅ.12: ಸುಮಾರು 28 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಕನ್ನಡಿಗರಿಂದ ಪ್ರಾರಂಭ ವಾದ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ರಿ ಮಂಗಳೂರು ಎಂಬ ಸಂಸ್ಥೆ ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ರಂಗ ಗಳಲ್ಲಿ ಕಳೆದ 28 ವರ್ಷ ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಇದೀಗ ಸಂಸ್ಥೆ ಇಪ್ಪತ್ತೊಂಬತ್ತನೇ ವರ್ಷಕ್ಕೆ ಕಾಲಿಡುತಿದ್ದು ಅಕ್ಟೋಬರ್ 13 ರಂದು ತನ್ನ ಸ್ಥಾಪಕ ದಿನವನ್ನು ಆಚರಿಸುತ್ತಿದೆ.
ಇದರ ಭಾಗವಾಗಿ ಸಂಸ್ಥೆಯ ವಿದ್ಯಾಕೇಂದ್ರವಾದ ಅಲ್ ಇಹ್ಸಾನ್ ಸ್ಕೂಲ್ ಕ್ಯಾಂಪಸಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗಿದೆ. ಬೆಳಿಗ್ಗೆ 9:30ಕ್ಕೆ ಮರ್ಕಝ್ ಮುಖ್ಯ ಕ್ಯಾಂಪಸ್ಸಿನಿಂದ ಅಲ್ ಇಹ್ಸಾನ್ ಸ್ಕೂಲಿಗೆ ಶೈಕ್ಷಣಿಕ ಜಾಥಾ, ದ್ವಜಾರೋಹನ, ವಿವಿಧ ವಿದ್ಯಾಭ್ಯಾಸ ಸೆಮಿನಾರ್‌ಗಳು ನಡೆಯಲಿದ್ದು ನಂತರ ಮರ್ಕಝ್ ಕ್ಯಾಂಪಸ್ಸಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕೇಂದ್ರ ಸಮಿತಿ ಮತ್ತು ಮರ್ಕಝ್ ಆಡಳಿತ ಸಮಿತಿಯ ಅಧ್ಯಕ್ಷರಾದ ಬಹು ಅಸ್ಯಯ್ಯಿದ್ ಕೆ ಎಸ್ ಆಟಕೋಯ ತಙಂಳ್ ಸಹಿತ ಹಲವಾರು ಗಣ್ಯ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ನೇತಾರರು ಭಾಗವಹಿ ಸಲಿದ್ದಾರೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಯು ಕೆ ಮುಸ್ತಫಾ ಸಅದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.