ಬಂಟರ ಕ್ರೀಡಾ ಸಂಗಮ: ಬಿತ್ತಿಪತ್ರ ಬಿಡುಗಡೆ
ಉಡುಪಿ : ಉಡುಪಿಯಲ್ಲಿ ಅ.೨೮ ಮತ್ತು ೨೯ರಂದು ನಡೆಯಲಿರುವ ಬಂಟರ ಕ್ರೀಡಾ ಸಂಗಮ ಮತ್ತು ಸಾಂಸ್ಕೃತಿಕ ವೈಭವದ ಪೂರ್ವಭಾವಿ ಸಭೆಯು ಇಂದು ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ ನೇತೃತ್ವದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಡಾ.ಬಿ.ಬಿ.ಶೆಟ್ಟಿ ವಹಿಸಿದ್ದರು. ವಿವಿಧ ಸಮಿತಿಯ ಮುಖ್ಯಸ್ಥರುಗಳು ಕಾರ್ಯಕ್ರಮದ ಪೂರ್ವ ತಯಾರಿ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಚಾರದ ವಾಹನದ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ.ರೋಶನ್ ಶೆಟ್ಟಿ, ಮನೋಹರ್ ಶೆಟ್ಟಿ, ತೂನ್ಸೆ ತ್ಯಾಗರಾಜ ಶೆಟ್ಟಿ ಕೊಲ್ಹಾಪುರ, ನಾಗೇಶ್ ಹೆಗ್ಡೆ, ಸಂತೋಷ ಶೆಟ್ಟಿ ಪಡುಬಿದ್ರೆ, ನವೀನ್ ಶೆಟ್ಡಿ ಪಡುಬಿದ್ರೆ, ಉದಯ ಶೆಟ್ಟಿ ಮುನಿಯಾಲ್, ಭುಜಂಗ ಶೆಟ್ಟಿ ಬ್ರಹ್ಮಾವರ, ಹರೀಶ್ ಶೆಟ್ಟಿ ಪೇತ್ರಿ, ನಿತೀಶ್ ಶೆಟ್ಟಿ ಹಿರಿಯಡ್ಕ, ಶ್ರೀಧರ್ ಶೆಟ್ಟಿ ಅರೋರು ಮೊದಲಾದವರು ಉಪಸ್ಥಿತರಿ ದ್ದರು. ಈಶ್ವರ ಚಿಟ್ಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.