×
Ad

ವಾಲಿಬಾಲ್ ಪ್ರೀಮಿಯರ್ ಲೀಗ್ ಆಮಂತ್ರಣ ಪತ್ರಿಕೆ ಬಿಡುಗಡೆ

Update: 2023-12-07 18:11 IST

ಬ್ರಹ್ಮಾವರ, ಡಿ.7: ಮಟಪಾಡಿ ಶ್ರೀ ನಿಕೇತನ ಶಾಲೆ, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವ ದಲ್ಲಿ ಶಾಲಾ ಶ್ರೇಯೋಭಿವೃದ್ಧಿ ಗಾಗಿ ಆಯೋಜಿಸಿರುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ಶ್ರೀನಿಕೇತನ ಕಪ್ ಮತ್ತು ಶ್ರೀನಿಕೇತನ ಪ್ರೀಮಿಯರ್ ಲೀಗ್ -2023 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರಗಿತು.

ಆಮಂತ್ರಣ ಪತ್ರಿಕೆಯನ್ನು ಶ್ರೀನಿಕೇತನಪ್ರೌಢ ಶಾಲೆಯ ನಿವೃತ್ತ ಮುಖ್ಯೋ ಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರೌಢ ಶಾಲಾ ನಿವೃತ್ತ ಅಧ್ಯಾಪಕರಾದ ರವಿರಾಜ್ ಶೆಟ್ಟಿ, ದಿನಕರ್ ಶೆಟ್ಟಿ, ಪ್ರಾಥಮಿಕ ಶಾಲೆಯ ಅಧ್ಯಾಪಕ ಶಿವರಾಮ ಶೆಟ್ಟಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪ್ರವೀಣ್ ಹೆಗ್ಡೆ, ಡಿಸೇಂಟ್ ಫ್ರೆಂಡ್ಸ್‌ನ ಸುರೇಶ್ ಕರ್ಕೇರಾ, ಫ್ರೆಂಡ್ಸ್ ಮಟಪಾಡಿಯ ಶರತ್ ನಾಯಕ್, ಶಿವಾಜಿ ಫ್ರೆಂಡ್ಸ್‌ನ ಸಂತೋಷ್, ವಾಲಿಬಾಲ್ ಪಂದ್ಯಾಕೂಟದ ಕಾರ್ಯಕಾರಿ ಸಮಿತಿಯ ಖಜಾಂಚಿ ಜೋಯ್ಸನ್ ಬಾಂಜ್, ಪ್ರಧಾನ ಕಾರ್ಯದರ್ಶೀ ಶರೋನ್ ಸಿಕ್ವೇರಾ ಉಪಸ್ಥಿತರಿದ್ದರು. ಚೇತನ್ ಪೂಜಾರಿ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News