ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
Update: 2023-12-09 20:40 IST
ಸಾಂದರ್ಭಿಕ ಚಿತ್ರ
ಕೋಟ, ಡಿ.9: ಪಾರಂಪಳ್ಳಿ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ನಡೆದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾರಂಪಳ್ಳಿಯ ಅಕ್ಕು(82) ಎಂದು ಗುರುತಿಸಲಾಗಿದೆ. ಇವರು ಡಿ.4ರಂದು ಮನೆಯಲ್ಲಿ ಬಿಸಿನೀರು ಕಾಯಿಸಲು ಒಲೆಗೆ ಬೆಂಕಿ ಹಾಕುವಾಗ ಆಕಸ್ಮಿಕವಾಗಿ ಬೆಂಕಿ ಸೀರೆಗೆ ತಗಲಿತ್ತೆನ್ನಲಾಗಿದೆ. ಇದರಿಂದ ದೇಹ ಸುಟ್ಟು ಹೋಗಿ ಗಂಭೀರ ಸ್ಥಿತಿಯಲ್ಲಿದ್ದ ಅಕ್ಕು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.9ರಂದು ಬೆಳಗಿನ ಜಾವ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.