×
Ad

ದಿಲ್ಲಿಯಲ್ಲಿ ಯತ್ನಾಳ್‌ರ ಗೊಂದಲ ಪರಿಹಾರ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

Update: 2023-12-09 20:51 IST

ಉಡುಪಿ : ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಅಸಮಧಾನಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೊಂದಲ ಅವರ ಹೊಸದಿಲ್ಲಿ ಭೇಟಿಯ ಬಳಿಕ ಪರಿಹಾರ ಕಾಣಲಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಈ ವಿಚಾರವಾಗಿ ತಾನು ಹೊಸದಿಲ್ಲಿಗೆ ತೆರಳಿ ಹಿರಿಯ ನಾಯಕರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಅವರು ತಮ್ಮ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಿದ್ದಾರೆ. ಹೊಸದಿಲ್ಲಿಗೆ ಹೋಗಿ ಬಂದ ನಂತರ ಎಲ್ಲಾ ಗೊಂದಲ ಪರಿಹಾರವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯತ್ನಾಳ್ ಬಿಜೆಪಿಯ ಒಳ್ಳೆಯ ಮುಖಂಡರಲ್ಲಿ ಒಬ್ಬರು. ಸ್ವಾಭಾವಿಕ ವಾಗಿಯೇ ಕೆಲವೊಂದು ಮಾತುಗಳನ್ನು ಆಡುತ್ತಾರೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ನಮಗಿಂತ ದೊಡ್ಡವರು ಸೂಕ್ತ ಕಾಲದಲ್ಲಿ ತೀರ್ಮಾನ ಮಾಡುತ್ತಾರೆ. ಶಿಸ್ತು ಕ್ರಮಕ್ಕಿಂತ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಭಾವನೆ ವಿಜಯೇಂದ್ರ ಅವರಲ್ಲಿದೆ ಎಂದರು.

ಕಲಾಪದ ವೇಳೆ ವಿಪಕ್ಷ ಸದಸ್ಯರ ನಡುವೆ ಒಮ್ಮತ ಇಲ್ಲದ ವಿಚಾರದ ಕುರಿತು ಪ್ರಶ್ನಿಸಿದಾಗ, ವಿಷಯಗಳು ಜಾಸ್ತಿಯಾ ದಾಗ ಕಲಾಪದಲ್ಲಿ ಒಮ್ಮೊಮ್ಮೆ ಗಡಿಬಿಡಿ ಆಗುತ್ತೆ. ನಮ್ಮಲ್ಲಿ ಒಮ್ಮತ ಇದೆ ವಿಷಯದ ಒತ್ತಡ ಜಾಸ್ತಿ ಇದೆ ಅಷ್ಟೇ ಎಂದರು.

ಮೌಲ್ವಿ ಹಾಶ್ಮಿ ವಿರುದ್ಧ ಯತ್ನಾಳ್ ಆರೋಪದ ಕುರಿತು ಪ್ರಶ್ನಿಸಿದಾಗ, ಯತ್ನಾಳ್ ಒಂದಿಷ್ಟು ಆರೋಪಗಳನ್ನು ಮಾಡಿ ದ್ದಾರೆ. ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ಸಹ ಒಂದಿಷ್ಟು ಹೇಳಿಕೆ ಕೊಟ್ಟಿದ್ದಾರೆ. ವಾಸ್ತವಿಕ ಸತ್ಯ ಏನು? ತಿಳಿಯಬೇಕು. ಯತ್ನಾಳ್ ಅವರ ಪ್ರತಿಕ್ರಿಯೆ ನೋಡಿ ಏನಾದರೂ ಹೇಳಬಹುದು ಎಂದರು.

ಬಡವರ ಮಕ್ಕಳಿಗೆ ಅನ್ಯಾಯ: ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿದ ವಿಚಾರವಾಗಿ ಮಾತನಾ ಡಿದ ಕೋಟ, ಖಾಸಗಿ ಶಾಲೆಗಳಲ್ಲಿ ಎನ್‌ಇಪಿ ಇದೆ. ಡಿಕೆಶಿ, ಖರ್ಗೆ, ಡಾ.ಪರಮೇಶ್ವರ್ ಮಾತ್ರವಲ್ಲದೇ ನಮ್ಮ ಹಾಗೂ ಜೆಡಿಎಸ್ ಪಕ್ಷದ ಹಲವರು ಖಾಸಗಿ ಶಾಲೆಗಳನ್ನು ನಡೆಸುತಿದ್ದಾರೆ. ಆದರೆ ಬಡವರ ಮಕ್ಕಳು ಕಲಿಯುವ ಸರಕಾರಿ ಶಾಲೆಗಳಲ್ಲಿ ಎನ್‌ಇಪಿ ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಅಲೆಮಾರಿ ಮಕ್ಕಳು, ಬಡವರ ಮಕ್ಕಳು ಹೋಗುವ ಶಾಲೆಗಳಲ್ಲಿ ಇದರಿಂದ ತೊಂದರೆಯಾಗುತ್ತದೆ. 48,000 ಸರಕಾರಿ ಶಾಲೆಗಳಿವೆ. ಇಲ್ಲಿನ ಬಡ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News