ಮಣಿಪಾಲ ವಾಗ್ಶದ ವಾರ್ಷಿಕೋತ್ಸವ -ಪ್ರಶಸ್ತಿ ಪ್ರದಾನ ಸಮಾರಂಭ
ಮಣಿಪಾಲ, ಡಿ.10: ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್(ಮಾಹೆ)ಯ ಪ್ರತಿಷ್ಠಿತ ಘಟಕವಾಗಿರುವ ದ ವೆಲ್ಕಮ್ ಗ್ರೂಪ್ ಗ್ರ್ಯಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಎಡ್ಮಿನಿಸ್ಟ್ರೇಶನ್ ವಾಗ್ಶದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಡಿ.7ರಂದು ಮಣಿಪಾಲ್ ಫಾರ್ಚೂನ್ ಇನ್ ವ್ಯಾಲಿವ್ಯೆನ ಮುಕ್ತ ಸಭಾಂಗಣದಲ್ಲಿ ಜರಗಿತು.
ಎಚ್‌ಆರ್ ಆ್ಯಂಡ್ ಲರ್ನಿಂಗ್ ಆಂಡ್ ಡೆವಲಪ್‌ಮೆಂಟ್ ಹೊಟೇಲ್ಸ್ ಡಿವಿಜನ್, ಐಟಿಸಿ ಉಪಾಧ್ಯಕ್ಷ ಸಂಜಯ್ ಬೋಸ್ ಮಾತನಾಡಿ, ಐಟಿಸಿಯ ಜೊತೆಗಿನ ಪಾಲುದಾರಿಕೆಯಲ್ಲಿ ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ವಾಗ್ಶ ನೀಡುತ್ತಿರುವ ಕೊಡುಗೆ ಯನ್ನು ಉಲ್ಲೇಖಿಸಿದರು. ಶೆಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಹೊಂದುವುದರ ಜೊತೆಗೆ, ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಅಂತಃಪ್ರಜ್ಞೆಯ ಜಾಗೃತಿಗಾಗಿಯೂ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ವಾಗ್ಶದ ಬೋಧಕ ಸಿಬಂದಿಗಳ ಹೊಸ ಪುಸ್ತಕ ಅತಿಥಿ ಸತ್ಕಾರದ ರಸಿಕರ ನೇರ ಅನುಭವಗಳು ‘ಲಿವ್ಡ್ ಎಕ್ಸಿಪೀರಿಯನ್ಸಸ್ ಆಫ್ ಹಾಸ್ಟಿಟಾಲಿಟಿ ಕನೋಯಿ ಶಸರ್ಸ್’ ಬಿಡುಗಡೆಗೊಳಿಸಲಾಯಿತು. ವಾಗ್ಶ ಪ್ರಾಂಶುಪಾಲ ಡಾ.ಚೆಫ್ ಕೆ.ತಿರುಗ್ನಾನ ಸಂಬಂಧಮ್ ವಾರ್ಷಿಕ ವರದಿಯನ್ನು ಮಂಡಿಸಿದರು. ಶೆಕ್ಷಣಿಕ ಸಾಧನೆಗಾಗಿ ನೀಡುವ ಐಟಿಸಿ ಅಧ್ಯಕ್ಷರ ಚಿನ್ನದ ಪದಕ, ಪ್ರತಿಷ್ಠಿತ ಹಳೆ ವಿದ್ಯಾರ್ಥಿ ಪ್ರಶಸ್ತಿಯನ್ನು ಗಿಜು ವರ್ಗೀಸ್ ಮತ್ತು ಸುಮಿತಾ ಕೌಲ್ ಅವರಿಗೆ ಪ್ರದಾನ ಮಾಡಲಾಯಿತು.
ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಪಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್, ಕಾರ್ಯತಂತ್ರ ಮತ್ತು ಯೋಜನಾ ವಿಭಾಗದ ಸಹ ಉಪಕುಲತಿ ಡಾ.ಎನ್.ಎನ್.ಶರ್ಮಾ. ಕುಲಸಚಿವ ಡಾ.ಗಿರಿಧರ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.