ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ
ಮಂಗಳೂರು: ಕೌಟುಂಬಿಕ ಸಂಪರ್ಕವು ಸದಾ ಉತ್ತಮವಾಗಿರಬೇಕು. ಹಾಗಾದರೆ ಮಾತ್ರ ಸಮಾಜದಲ್ಲಿ ಅತ್ಯುತ್ತಮವಾಗಿ ಬದುಕಲು ಸಾಧ್ಯವಿದೆ. ಅಲ್ಲದೆ ಕುಟುಂಬದೊಳಗೆ ಒಗ್ಗಟ್ಟು ಇದ್ದರೆ ಹಲವು ಸೇವೆಗಳು ಸಮಾಜಕ್ಕೂ ಲಭಿಸುತ್ತವೆ. ಕುಟುಂಬದ ಹಿರಿಯರಾದ ಡಾ.ಕೆ. ಕುಂಞಾಲಿ ತಮ್ಮ ಆತ್ಮ ಚರಿತ್ರೆಯನ್ನು ದಾಖಲಿಸಬೇಕು ಮತ್ತು ಅದರಿಂದ ಸಮಾಜ ಸ್ಫೂರ್ತಿ ಪಡೆಯುವಂತಾಗಬೇಕು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಮುಟ್ಟಾಜೆ ಕುಂಞಾಲಿ ಹಾಜಿ ಫ್ಯಾಮಿಲಿ ಅಸೋಸಿಯೇಶನ್ ದಶಮಾನೋತ್ಸವ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಡಾ.ಕೆ.ಕುಂಞಾಲಿ ಕಳೆದ ಹತ್ತು ವರ್ಷಗಳಲ್ಲಿ ಹಲವು ಕೌಟುಂಬಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ಕುಟುಂಬದ ಸದಸ್ಯರು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ದಶಮಾನೋತ್ಸವ ಕಾರ್ಯಕ್ರಮವು ಎರಡು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಇದರ ಅಂಗವಾಗಿ ಸಾರ್ವಜನಿಕ ಬಸ್ ತಂಗುದಾಣ, ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಕ್ತದಾನ ಶಿಬಿರ, ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳು, ಕುಟುಂಬ ಸಂಗಮ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಮಾತನಾಡಿ ಡಾ.ಕೆ.ಕುಂಞಾಲಿಯವರ ನೇತೃತ್ವದಲ್ಲಿ ಮುಟ್ಟಾಜೆ ಫ್ಯಾಮಿಲಿ ಅಸೋಸಿಯೇಶನ್ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಅಭಿನಂದನೀಯ.ಯಾವುದೇ ಕುಟುಂಬ ಶೈಕ್ಷಣಿಕವಾಗಿ ಬಲಿಷ್ಠವಾದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಕುಟುಂಬದ ಹಿರಿಯರಾದ ಖತೀಜಮ್ಮ ಹಜ್ಜುಮ್ಮ ಬಾಚಳಿಕೆ ಮತ್ತು ಡಾ.ಮುಹಮ್ಮದ್ ಶಾಲಿಮಾರ್‌ರನ್ನು ಸನ್ಮಾನಿಸಲಾಯಿತು.
ಡಾ.ಸಾದತ್ ಹುಸೈನ್, ಅಝ್ಮೀನ, ಡಾ.ಹಸನ್ ಸಾನಿಮ್ , ಡಾ.ಅಬ್ದುಲ್ ಹಶದ್ , ಖತೀಜತ್ ಅಸ್ಪಾನ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸರಕಾರದ ನಿವೃತ್ತ ಅಧಿಕಾರಿ ಎನ್.ಇಬ್ರಾಹಿಂ ನಾಯರ್‌ಮೂಲೆ ಭಾಗವಹಿಸಿದ್ದರು. ಅಸೋಸಿಯೇಶನ್ ಉಪಾಧ್ಯಕ್ಷ ಡಾ.ಎನ್.ಉಮರ್, ಅಬೂಸ್ವಾಲಿಹ್ ಹಾಜಿ ಪಾರೆ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಮುಟ್ಟಾಜೆ, ನೂತಿಲ ಮುಹಮ್ಮದ್, ಕನ್ವೀನರ್ ಹಮೀದ್ ಪಾರೆ, ಅಹ್ಮದಲಿ ಕಾನಾಜೆ, ಬಿ.ಕುಂಞಿ ಅಂದು, ಹಮೀದ್ ಎಡಂಬಳೆ, ಅಬ್ಬು ಹಾಜಿ, ರಝಾಕ್ ಬಾಚಳಿಕೆ, ಹಾರಿಸ್ ಬಾಚಳಿಕೆ, ಅಶ್ರಫ್ ಬಾಚಳಿಕೆ, ಇಬ್ರಾಹಿಂ ಪಾರೆ, ಅಬ್ದುಲ್ಲ ಪಾರೆ, ಕುಂಞಿಮೋನು ನಾಯರ್‌ಮೂಲೆ, ಕಾರ್ಯದರ್ಶಿ ನಫೀಸಾ ಉಮರ್, ಕುಂಞಿ ಮುಟ್ಟಾಜೆ, ಸಾದಿಕ್ ಮುಟ್ಟಾಜೆ ಉಪಸ್ಥಿತರಿದ್ದರು.
ಹಮೀದ್ ಕುಂಞಾಲಿ ಸ್ವಾಗತಿಸಿದರು. ಆಲಿಕುಂಞಿ ಪಾರೆ ಮತ್ತು ಎನ್. ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು. ಡಾ.ಎ.ಎ.ಫಝಲ್ ವಂದಿಸಿದರು.