ಕುಂದಾಪುರ: ಮೂಡ್ಲಕಟ್ಟೆ ಕಾಲೇಜಿನಲ್ಲಿ ಭಾರತೀಯ ಭಾಷಾ ದಿನಾಚರಣೆ
ಕುಂದಾಪುರ, ಡಿ.11: ಮೂಡ್ಲಕಟ್ಟೆಯ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜಿನಲ್ಲಿ ಸೋಮವಾರ ಮಹಾಕವಿ ಸುಬ್ರಮಣ್ಯ ಭಾರತಿ ಜಯಂತಿ ಪ್ರಯುಕ್ತ ಭಾರತೀಯ ಭಾಷಾ ದಿನ ಕಾರ್ಯಕ್ರಮ ಲಲಿತಕಲಾ ಸಂಘ ಮತ್ತು ಸಾಹಿತ್ಯ ಸಂಘದ ಸಹಯೋಗ ದಲ್ಲಿ ಯಶಸ್ವಿಯಾಗಿ ನೆರವೇರಿತು.
ಭಾರತದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಭಾಷಾ ಸಾಮರಸ್ಯವನ್ನು ಸೃಷ್ಟಿಸಲು ಮತ್ತು ಭಾರತೀಯ ಭಾಷೆಯನ್ನು ಕಲಿಯಲು ಅನುಕೂಲ ವಾತಾವರಣವನ್ನು ಅಭಿವೃದ್ಧಿಪಡಿಸಲು, ಪ್ರತಿ ವರ್ಷ ಶ್ರೇಷ್ಠ ಕವಿ ಸುಬ್ರಹ್ಮಣ್ಯ ಭಾರತಿ ಅವರ ಜನುಮ ದಿನವಾದ ಡಿಸೆಂಬರ್ 11ನ್ನು ಭಾರತೀಯ ಭಾಷಾ ದಿನವಾಗಿ ಆಚರಿಸಲಾಗುತ್ತಿದೆ.
‘ಭಾಷೆಗಳು ಅನೇಕ, ಭಾವವು ಒಂದೇ! ಮಹಾಕವಿ ಸುಬ್ರಮಣ್ಯ ಭಾರತಿ ಜಯಂತಿಯ ಶುಭಾಶಯಗಳು!’ ಈ ವಾಕ್ಯವನ್ನು ಸಂಸ್ಥೆಯ ವಿದ್ಯಾರ್ಥಿಗಳು ಕನ್ನಡ, ಕುಂದಾಪುರ ಕನ್ನಡ, ತುಳು ಭಾಷೆ, ಉರ್ದು ಭಾಷೆ, ಹಿಂದಿ, ಸಂಸ್ಕೃತ ಕೊಂಕಣಿ ಭಾಷೆ, ಕ್ರಿಶ್ಚಿಯನ್ ಕೊಂಕಣಿ, ಬ್ಯಾರಿ, ಮಲಯಾಳಿ, ಮರಾಠಿ, ತೆಲುಗು ಹಾಗೂ ಕಾರವಾರ ಕೊಂಕಣಿಯಲ್ಲಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ಸ್ವರ್ಣ ರಾಣಿ, ಲಲಿತ ಕಲಾಸಂಘದ ಸಂಯೋಜಕಿ ಪ್ರೊ. ಸುಮನ, ಸಾಹಿತ್ಯ ಸಂಘದ ಸಂಯೋಜಕಿ ಪ್ರೊ. ಪಾವನ ಹಾಗೂ ಇತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬಿಸಿಎ ವಿಭಾಗದ ರಶಿತ ನಿರೂಪಿಸಿ, ಸಿಂಚನ ಮತ್ತು ಸನ್ನಿಧಿ ಪಿ ವೈ. ಭಾಷಾ ದಿನಾಚರಣೆ ಕುರಿತು ಮಾತನಾಡಿದರು.