ಯುವಕ ಆತ್ಮಹತ್ಯೆ
Update: 2023-12-11 21:05 IST
ಕುಂದಾಪುರ, ಡಿ.11: ಬೆಂಗಳೂರಿನಿಂದ ಯುವಕನೋರ್ವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.9ರಂದು ಮಧ್ಯಾಹ್ನ ವೇಳೆ ಕೋಟೇಶ್ವರದ ಕುಂಬ್ರಿ ಎಂಬಲ್ಲಿ ನಡೆದಿದೆ.
ಮೃತರನ್ನು ಕುಂಬ್ರಿಯ ಮಂಜುನಾಥ ಕೆ. ಎಂಬವರ ಮಗ ಮೋಹಿತ್ ಎಂ.(22) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಇವರು, ಡಿ.8ರಂದು ಬೆಂಗಳೂರಿನಿಂದ ಹೊರಟು ಡಿ.9ರಂದು ಬೆಳಗ್ಗೆ ಮನೆಗೆ ತಲುಪಿದ್ದರು. ಮಧ್ಯಾಹ್ನ ಊಟ ಮುಗಿಸಿ ಮನೆಯ ಮಹಡಿಯ ಮೇಲಿನ ರೂಮಿನ ಫ್ಯಾನಿನ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.