×
Ad

ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ

Update: 2023-12-14 21:32 IST

ಉಡುಪಿ, ಡಿ.14: ರಥಬೀದಿಯಲ್ಲಿರುವ ಉಡುಪಿಯ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ರಥೋತ್ಸವ ಇಂದು ಬೆಳಿಗ್ಗೆ ಭಾವಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಇದೇ ಸಂದರ್ಭದಲ್ಲಿ ರಥಬೀದಿಯಲ್ಲಿ ಪರ್ಯಾಯೋತ್ಸವದ ಅನಂತ ದ್ವಾರ ಸ್ವಾಗತ ಮಂಟಪದ ಉದ್ಘಾಟನೆಯನ್ನು ಸಹ ಪುತ್ತಿಗೆ ಶ್ರೀಪಾದರು ನೆರವೇರಿಸಿದರು.

ಸಂಜೆ ವಿಶೇಷ ಬ್ಯಾಂಡ್ ವಾದ್ಯ, ಸುಡುಮದ್ದು ಸುಡುವುದರೊಂದಿಗೆ ದೇವರ ರಥೋತ್ಸವವು ರಥಬೀದಿಯಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತು.

ಸಾವಿರಾರು ಮಂದಿ ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು. ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ವ್ಯವಸ್ಥಾಪಕ ರಾದ ವಿಷ್ಣುಮೂರ್ತಿ ಉಪಾಧ್ಯಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News