×
Ad

ಉಡುಪಿ ಯೂನಿಯನ್ ಬ್ಯಾಂಕಿನಲ್ಲಿ ಗ್ರಾಹಕರ ಸಮಾವೇಶ

Update: 2023-12-15 20:28 IST

ಉಡುಪಿ, ಡಿ.15: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಗ್ರಾಹಕರ ಸಮಾವೇಶವು ಇಂದು ಉಡುಪಿ ಶಾಖೆಯಲ್ಲಿ ಜರಗಿತು.

ಬ್ಯಾಂಕಿನ ಉಡುಪಿ ಪ್ರಾದೇಶಿಕ ವಲಯದ ಮುಖ್ಯಸ್ಥ ಹಾಗೂ ಸಹಾಯಕ ಮಹಾ ಪ್ರಬಂಧಕ ನರೇಶ್ ಕುಮಾರ್ ವೈ ಮಾತನಾಡಿ, ಗ್ರಾಹಕರಿಗೆ ಗುಣ ಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ. ಯಾವುದೇ ಲೋಪ ಗಳಿದ್ದರೂ ಮುಕ್ತವಾಗಿ ನಮ್ಮೊಂದಿಗೆ ಹಂಚಬಹುದಾಗಿದೆ. ಉತ್ತಮ ಕಾರ್ಯಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವುದು ಮುಖ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರನ್ನು ಗೌರವಿಸಲಾಯಿತು. ಉಡುಪಿ ಶಾಖೆಯ ಮುಖ್ಯ ಪ್ರಬಂಧಕ ವೆಂಕಟೇಶ್ ಬಿ.ವಿ. ಮಾತನಾಡಿದರು. ಸಿಬ್ಬಂದಿ ನಾಗೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News