ಅತಂತ್ರ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ
Update: 2023-12-20 20:54 IST
ಉಡುಪಿ, ಡಿ.20: ಉಡುಪಿ ನಗರಸಭೆಯ ಬಳಿ ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದ ಅಪರಿಚಿತ ಮಹಿಳೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಬುಧವಾರ ರಕ್ಷಿಸಿ, ನಿಟ್ಟೂರಿನ ಸಖಿ ಸೆಂಟರಿನಲ್ಲಿ ತಾತ್ಕಾಲಿಕ ನೆಲೆ ಕಲ್ಪಿಸಿದ್ದಾರೆ.
ರಕ್ಷಿಸಲ್ಪಟ್ಟ ಮಹಿಳೆಯನ್ನು ಯಲ್ಲಾಪುರದ ರೇಷ್ಮಾ(42) ಎಂದು ಗುರುತಿಸ ಲಾಗಿದೆ. ತೆರಿಗೆ ರಶೀದಿ ಬರಹಗಾರ್ತಿ ವಿದ್ಯಾ ಶೆಟ್ಟಿ ಮಹಿಳೆಯ ಅಸಹಾಯಕ ಪರಿಸ್ಥಿತಿ ಕಂಡು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದರು.
ಕೆಲಸದ ಹುಡುಕಾಟದ ಕಾರಣದಿಂದ ಆಕೆ ಉಡುಪಿಗೆ ಬಂದಿರುವುದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸುಮತಿ ಹಾಗೂರಮ್ಯಾ ಕುಂದರ್ ಭಾಗಿಯಾಗಿದ್ದರು.