×
Ad

ವಾರಸುದಾರರಿಗೆ ಸೂಚನೆ

Update: 2023-12-20 21:01 IST

ಉಡುಪಿ, ಡಿ.20: ಕಾಪು ತಾಲೂಕು ನಾಡ್ಸಾಲು ಗ್ರಾಮ ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ -66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಡಿ.4ರಂದು ಬೆಳಗ್ಗೆ 5:45ರ ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿದ್ದ ಕೆ.ಎ-20 ಡಬ್ಲ್ಯೂ-9937 ಬೈಕ್‌ನ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ರಸ್ತೆಯ ಪಶ್ಚಿಮ ಬದಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 66 ವರ್ಷದ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅವರು ಡಿ.14ರಂದು ಮೃತಪಟ್ಟಿದ್ದರು.

ಮೃತವ್ಯಕ್ತಿಯು ಸುಮಾರು 50-55 ವರ್ಷದವರಾಗಿದ್ದು, 5 ಅಡಿ 9 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿರುತ್ತಾರೆ. ಮೃತವ್ಯಕ್ತಿಯ ವಾರಾಸುದಾರರು ಯಾರಾದರೂ ಇದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ದೂ.ಸಂಖ್ಯೆ: 0820-2555452, ಮೊ.ನಂ: 9480805450, ಕಾಪು ವೃತ್ತ ನಿರೀಕ್ಷಕರು ದೂ.ಸಂಖ್ಯೆ: 0820-2552133, ಮೊ.ನಂ: 9480805431, ಪೊಲೀಸ್ ಕಂಟ್ರೋಲ್ ರೂಂ. 0820-2525444 ಅನ್ನು ಸಂಪರ್ಕಿಸಬಹುದು ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News