ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನಗಾರ ಮೃತ್ಯು
Update: 2023-12-23 20:44 IST
ಗಂಗೊಳ್ಳಿ, ಡಿ.23: ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕ ವಾಗಿ ದೋಣಿಯಿಂದ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಡಿ.23ರಂದು ಬೆಳಗ್ಗೆ ಮರವಂತೆ ಸಮೀಪ ನಡೆದಿದೆ.
ಮೃತರನ್ನು ಮರವಂತೆ ಗ್ರಾಮದ ಶಂಕರ(62) ಎಂದು ಗುರುತಿಸಲಾಗಿದೆ. ಇವರು ಸಮುದ್ರದಲ್ಲಿ ಬಲೆಯನ್ನು ವಾಪಾಸ್ಸು ಎಳೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ದೋಣಿಯಿಂದ ಸಮುದ್ರದಕ್ಕೆ ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಕೂಡಲೇ ನೀರಿನಿಂದ ಮೇಲಕ್ಕೆತ್ತಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಶಂಕರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.