ಕೋಳಿ ಅಂಕಕ್ಕೆ ದಾಳಿ: ನಾಲ್ವರ ಬಂಧನ
Update: 2023-12-24 20:39 IST
ಅಮಾಸೆಬೈಲು: ಅಮಾಸೆಬೈಲು ಗ್ರಾಮದ ಕೆಲಾ ಹೆಗ್ಗೋಡ್ಲು ಎಂಬಲ್ಲಿ ಡಿ.23ರಂದು ಮಧ್ಯಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ರವೀಂದ್ರ, ರತ್ನಾಕರ, ಆನಂದ, ರಾಘವೇಂದ್ರ ಬಂಧಿತ ಆರೋಪಿಗಳು. ಇವರಿಂದ 2600ರೂ. ಮೌಲ್ಯದ ನಾಲ್ಕು ಹುಂಜ ಕೋಳಿ, ಎರಡು ಕೋಳಿ ಬಾಳು ಹಾಗೂ 810ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.