ವಿಷದ ಹಾವು ಕಡಿತ: ಮಹಿಳೆ ಮೃತ್ಯು
Update: 2023-12-24 20:41 IST
ಶಂಕರನಾರಾಯಣ: ಮನೆಯ ಕೊಟ್ಟಿಗೆಯಲ್ಲಿ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಅಂಪಾರು ಗ್ರಾಮದ ಈರ್ಜಿ ಎಂಬಲ್ಲಿ ನಡೆದಿದೆ.
ಮೃತರನ್ನು ಅಂಪಾರುವಿನ ಹೇಮಲತಾ(58) ಎಂದು ಗುರುತಿಸಲಾಗಿದೆ.
ಡಿ.20ರಂದು ಸಂಜೆ ಮನೆಯ ಕೊಟ್ಟಿಗೆಯಲ್ಲಿರುವ ತೆಂಗಿನಕಾಯಿ ಹಾಕುವ ಕೋಣೆಗೆ ಹೋಗಿದ್ದ ಹೇಮಲತಾ ಅವರ ಕಾಲಿನ ಬೆರಳಿಗೆ ಹಾವೊಂದು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಿ.24ರಂದು ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.