×
Ad

ಮಣೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

Update: 2023-12-31 19:27 IST

ಉಡುಪಿ, ಡಿ.31: ಕುಂದಾಪುರ ತಾಲೂಕಿನ ಮಣೂರಿನಲ್ಲಿ ಮೂರು ದಿನ ಗಳ ಕಾಲ ನಡೆಯಲಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಉದ್ಯಮಿ ಡಾ.ಜಿ.ಶಂಕರ್ ಶನಿವಾರ ಸಂಜೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಸಭೆಯ ಪೂರ್ವದಲ್ಲಿ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ ಕೋಡಿ ಕನ್ಯಾನ ಇಲ್ಲಿನ ವಿದ್ಯಾರ್ಥಿಗಳಿಂದ ನವೀನ್ ಕೋಟ ನಿರ್ದೇಶನದಲ್ಲಿ ಗುರುದಕ್ಷಿಣೆ ಯಕ್ಷಗಾನ ಪ್ರದರ್ಶನ ನಡೆದರೆ, ಸಭೆಯ ಬಳಿಕ ತೆಕ್ಕಟ್ಟೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ಕಂದ ಇವರ ನಿರ್ದೇಶನದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನಗಳು ಪ್ರದರ್ಶನಗೊಂಡವು.

ಕುಂದಾಪುರದ ಶಾಸಕರಾದ ಕಿರಣ್‌ಕುಮಾರ್ ಕೋಡ್ಗಿ ಇವರ ಆಶಯ ದಂತೆ ವಿಧಾನಸಭಾ ಕ್ಷೇತ್ರದ 11 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ನೀಡಲಾಗುತ್ತಿದ್ದು, ಮಣೂರಿನಲ್ಲಿ ಆರು ಶಾಲೆಗಳು ಯಕ್ಷಗಾನ ಪ್ರದರ್ಶನ ನೀಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News