×
Ad

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2023-12-31 20:05 IST

ಕೋಟ: ಕೋಟತಟ್ಟು ಗ್ರಾಮದ ವಿಘ್ನೇಶ್(36) ಎಂಬವರು ಡಿ.25ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಬೈಕಿನಲ್ಲಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರನಾರಾಯಣ: ಅಜ್ರಿ ಗ್ರಾಮದ ಹೊಳಂದೂರು ಎಂಬಲ್ಲಿರುವ ಹೆಂಡತಿ ಮನೆಯಿಂದ ಕೆಲಸಕ್ಕೆಂದು ಡಿ.29ರಂದು ಹೋದ ಉದಯ (48) ಎಂಬವರು ಈವರೆಗೆ ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News