ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಆಗ್ರಹಿಸಿ ಧರಣಿ
Update: 2024-01-02 18:38 IST
ಉಡುಪಿ, ಜ.2: ಚೆಕ್ ಬೌನ್ಸ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಬಳಿ ಇಂದು ಧರಣಿ ನಡೆಸಲಾಯಿತು.
ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ಮಾತನಾಡಿ, ಭಾರತದ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ನಂಬಿರುವ ನಾವುಗಳು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಶಿಕ್ಷಣ ಸಚಿವನಾಗಿ ಮುಂದು ವರೆಯುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.
ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂಹಿತಾ ಕೆ., ನಗರ ಸಹ ಕಾರ್ಯದರ್ಶಿ ಕಾರ್ತಿಕ್, ಶಶಾಂಕ್, ಪ್ರಮುಖರಾದ ಶ್ರೀಹರಿ ಮತ್ತು ನಗರ ಕಾರ್ಯಾಲಯ ಪ್ರಮುಖರಾದ ಅನಂತ್ ಕೃಷ್ಣ, ನವೀನ್, ಸ್ವಸ್ತಿಕ್, ಧನ್ಯ, ಆದಿತ್ಯ, ಲ್ಯಾರಿ ಮೊದಲಾದವರು ಉಪಸ್ಥಿತರಿದ್ದರು.