×
Ad

ಗರಡಿ ಮಜಲು ಸರಕಾರಿ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

Update: 2024-01-04 20:33 IST

ಉಡುಪಿ: ಗರಡಿಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಮತ್ತು ಶಾಲೆ ಹಳೆ ವಿದ್ಯಾರ್ಥಿ ಸಂಘದ 56ನೇ ವರ್ಷದ ಸಂಯುಕ್ತ ವಾರ್ಷಿಕೋತ್ಸವ ಜ.6ರಂದು ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆೆ 8.30ಕ್ಕೆ ಗ್ರಾ.ಪಂ. ಅಧ್ಯಕ್ಷೆ ಶೋಭಾ ಡಿ.ನಾಯಕ್ ಧ್ವಜಾರೋಹಣ ನೆರವೇರಿಸಲಿರುವರು. ರಾತ್ರಿ 7.30ಕ್ಕೆ ಸಭಾ ಕಾರ್ಯಕ್ರಮ ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆಯಲ್ಲಿ ಜರಗಲಿದೆ. ಸಂಜೆ 5ಕ್ಕೆ ಅಂಗನವಾಡಿ, ಶಾಲೆಯ ವಿದ್ಯಾಾರ್ಥಿಗಳಿಂದ ವಿನೋದಾವಳಿ, ರಾತ್ರಿ 8.30ರಿಂದ ಹಳೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ ಪ್ರಸ್ತುತಪಡಿಸಲಿದ್ದಾರೆ ಎಂದರು.

1947ರಲ್ಲಿ ಆರಂಭವಾದ ಶಾಲೆಯು ಹಂತಹಂತವಾಗಿ ಅಭಿವೃದ್ಧಿಗೊಂಡಿದೆ. ಸರಕಾರ ಮತ್ತು ಹಳೆ ವಿದ್ಯಾಾರ್ಥಿಗಳು, ದಾನಿಗಳ ನೆರವಿನಿಂದ ಉತ್ತಮ ಮೂಲ ಸೌಕರ್ಯ ವ್ಯವಸ್ಥೆೆಯನ್ನು ಶಾಲೆ ಹೊಂದಿದೆ. ಇಲ್ಲಿ ಕಲಿತ ಸಾಕಷ್ಟು ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. 700ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ಸಕ್ರಿಯರಾಗಿದ್ದಾರೆ. ಪ್ರಸ್ತುತ 75 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸುವ ಚಿಂತನೆ ಹೊಂದಿದ್ದೇವೆ. ಸ್ಪೋಕನ್ ಇಂಗ್ಲಿಷ್ ತರಗತಿಗೆ ನುರಿತ ಶಿಕ್ಷಕರ ನೇಮಕ, ಪಾಠ ಬೋಧನೆಗೆ ಪ್ರಾಾಜೆಕ್ಟರ್ ವ್ಯವಸ್ಥೆೆ ಮಾಡಲಾಗುವುದು. ನೃತ್ತ, ಕರಾಟೆ, ಚಿತ್ರಕಲೆ ತರಗತಿ ಆರಂಭಿಸಿ ಇದಕ್ಕೆೆ ಶಿಕ್ಷಕರ ನೇಮಿಸಲಾಗುವುದು. ಪಠ್ಯ ಬೋಧನೆಗೆ ಖಾಯಂ ಶಿಕ್ಷಕರ ಕೊರತೆ ಇದ್ದು, ಈ ಬಗ್ಗೆೆ ಸರಕಾರಕ್ಕೆೆ ಮನವಿ ಸಲ್ಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಸತ್ಯವತಿ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ್ ಸಾಲ್ಯಾನ್, ಉಪಾಧ್ಯಕ್ಷೆೆ ಶೋಭಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಲ್ಫ್ರೆೆಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News