×
Ad

ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಮಹಾಸಭೆ

Update: 2024-01-09 19:19 IST

ಉಡುಪಿ: ಕುವೈತ್ ಮಣಿಪುರ ಮುಸ್ಲಿಂ ಅಸೋಸಿಯೇಶನ್ ಇದರ 20ನೇ ವರ್ಷದ ಹಾಗೂ 2023ರ ವಾರ್ಷಿಕ ಮಹಾ ಸಭೆಯ ಕಾರ್ಯಕ್ರಮವು ಸಂಘದ ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಾಲ್ಮಿಯ ಸುನ್ನೀ ಸೆಂಟರ್‌ನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಜಮಾಲ್ ಮಣಿಪುರ ಮಾತನಾಡಿದರು. ಲೆಕ್ಕ ಪರಿಶೋಧಕ ಜುಬೇರ್ ಶಾಬಾನ್ ಸಭೆಯನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಸಂಸ್ಥೆಯ ಕರ್ನಾಟಕ ಬ್ರಾಂಚ್ ಅಧ್ಯಕ್ಷ ಯೂಸುಫ್ ರಾಶಿದ್, ಮಾಜಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಶಫೀಕ್ ಅಹ್ಸನಿ ಇಮಾಮ್, ಮುಸ್ತಫ ಮದನಿ, ಕುವೈತ್ ಅಧ್ಯಕ್ಷ ಯೂಸುಫ್ ಮಂಚಕಲ್, ಸೆಂಟ್ರಲ್ ಕಮಿಟಿಯ ಖಜಾಂಜಿ ಸೈಯದ್ ರಫೀಕ್ ಮುಲ್ಕಿ, ಉಪಾಧ್ಯಕ್ಷ ಇಕ್ಬಾಲ್, ಕೆಸಿಎಫ್ ಕುವೈತ್ ಅಧ್ಯಕ್ಷ ಹುಸೈನ್ ಎರ್ಮಾಡ್, ಉಪಾಧ್ಯಕ್ಷ ಕರೀಂ ಬಿರಾಲಿ ಉಚ್ಚಿಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜುಬೇರ್ ಶಾಬಾನ್, ಫತಾವುಲ್ಲ, ಇಸ್ಮಾಯಿಲ್, ಉಬೈದುಲ್ಲಾ, ಲತೀಫ್, ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಅವರನ್ನು ಗೌರವಿಸಲಾಯಿತು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಉಚ್ಚಿಲ ಮಂಡಿಸಿದರು.

2024ರ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು ಗೌರವಾಧ್ಯಕ್ಷ ರಾಗಿ ಸೈಯದ್ ಅಹಮದ್, ಅಧ್ಯಕ್ಷರಾಗಿ ಜುಬೇರ್ ಶಾಬಾನ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ, ಕೋಶಾಧಿಕಾರಿ ಜಮಾಲ್ ಮಣಿಪುರ ಹಾಗೂ 13 ಇತರ ಸದಸ್ಯರನ್ನಾಗಿ ನೇಮಿಸಲಾಯಿತು.

ಮಾಸ್ಟರ್ ಸಾಬಿಕ್ ಕಿರಾಅತ್ ಪಠಿಸಿದರು. ಸ್ಥಾಪಕ ಗೌರವಾಧ್ಯಕ್ಷ ಸೈಯದ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಖಜಾಂಜಿ ಇಬ್ರಾಹಿಂ ಸ್ವಾಗತಿಸಿದರು. ಹುಸೈನ್ ಎರ್ಮಾಡ್ ಉಸ್ತಾದ್ ದುವಾ ನೆರವೇರಿಸಿದರು. ಸಂಘದ ಸದಸ್ಯ ಶೌಕತ್ ಶಿರ್ವ ವಂದಿಸಿದರು. ಹೈದರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News