×
Ad

ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Update: 2024-01-11 21:24 IST

ಉಡುಪಿ, ಜ.11: ಮೀನುಗಾರಿಕಾ ಇಲಾಖೆಯ 2022-23ನೇ ಸಾಲಿನಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ನಿರ್ವಸತಿ ಮೀನು ಗಾರರಿಗೆ ವಸತಿ ಕಲ್ಪಿಸಲು ಬಿಪಿಎಲ್ ಅಥವಾ ಆರ್ಥಿಕವಾಗಿ ಹಿಂದುಳಿದ, ಸ್ವಂತ ನಿವೇಶನ ಹೊಂದಿ ರುವ, ಹುಟ್ಟಿನಿಂದ ಅಥವಾ ವೃತ್ತಿಯಲ್ಲಿ ಮೀನುಗಾರರಾಗಿರುವ, ವಿವಾಹಿತ, ವಿಧವೆ, ವಿಧುರ ಹಾಗೂ ಮೀನುಗಾರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಒಟ್ಟು 98 (ಸಾಮಾನ್ಯ -74, ಪ.ಜಾ-17, ಪ.ಪಂ-7) ಗುರಿಗಳನ್ನು ಸರಕಾರದ ಆದೇಶದಂತೆ ನಿಗದಿ ಪಡಿಸಿದ್ದು, ಈಗಾಗಲೇ ಒಟ್ಟು 47 (ಸಾಮಾನ್ಯ-43, ಪ.ಜಾ-1, ಪ.ಪಂ-3) ಅರ್ಜಿಗಳು ಸ್ವೀಕೃತವಾಗಿವೆ. ಉಳಿದ 51 (ಸಾಮಾನ್ಯ-31, ಪ.ಜಾ-16, ಪ.ಪಂ-4) ಗುರಿಗಳಿಗೆ ಅರ್ಜಿ ಸಲ್ಲಿಸುವವರು ಆಯ್ಕೆ ಸಮಿತಿ ಅಧ್ಯಕ್ಷರ ಶಿಫಾರಸ್ಸು ಪತ್ರದೊಂದಿಗೆ ಪೂರಕ ದಾಖಲೆಗಳನ್ನು ಉಡುಪಿಯ ಮೀನುಗಾರಿಕಾ ಸಹಾಯಕ ನಿರ್ದೇಶಕ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News