×
Ad

ಉಡುಪಿ: ಹಿರಿಯ ನ್ಯಾಯವಾದಿ ಮೋಹನ್‌ದಾಸ್ ಶೆಟ್ಟಿ ನಿಧನ

Update: 2024-01-13 22:11 IST

ಉಡುಪಿ: ಉಡುಪಿಯ ಹಿರಿಯ ನ್ಯಾಯವಾದಿ, ನೋಟರಿ ಜಿ.ಮೋಹನ್‌ದಾಸ್ ಶೆಟ್ಟಿ (55) ಜ.13ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

1998ರಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಇವರು, ಉಡುಪಿಯ ಹಿರಿಯ ನ್ಯಾಯವಾದಿ ಆನಂದ ಶೆಟ್ಟಿ ಅವರೊಂದಿಗೆ ನ್ಯಾಯವಾದಿಯಾಗಿ ತರಬೇತಿ ಪಡೆದುಕೊಂಡಿದ್ದರು. 2001ರಿಂದ ಉಡುಪಿಯಲ್ಲಿ ಸ್ವಂತ ಕಚೇರಿ ಮಾಡಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ಣಾಟಕ ಬ್ಯಾಂಕ್, ಎಸ್‌ಸಿಡಿಸಿಸಿ, ಓರಿಯಂಟಲ್ ಇನ್ಶೂರೆನ್‌ಸ್‌ ಕಂಪೆನಿ ಲಿ, ಗುರು ಮಾಚಿದೇವ ವಿ.ಸ.ಸಂಘ, ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿದ್ದರು.

ಮೃತರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಉಡುಪಿ ವಕೀಲರ ಸಂಘ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News