ಕನ್ನಡ ನಾಮಫಲಕ ದೊಡ್ಡದಾಗಿ ಪ್ರದರ್ಶಿಸಿ: ಉಡುಪಿ ನಗರಸಭೆ
Update: 2024-01-23 21:28 IST
ಉಡುಪಿ, ಜ.23: ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆ. ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡ ಬಳಕೆ ಆಗಬೇಕೆನ್ನುವ ಹಿತದೃಷ್ಠಿಯಿಂದ, ನಮ್ಮ ನಾಡಿನ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ನಮ್ಮ ಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್ ಹಾಗೂ ಕಂಪನಿಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್ ಹಾಗೂ ಕಂಪನಿಗಳು ಇತರೆ ಭಾಷೆಯ ನಾಮಫಲಕ ಕ್ಕಿಂತ ಕನ್ನಡ ಭಾಷೆಯ ನಾಮಫಲಕವನ್ನು ದೊಡ್ಡದಾಗಿ ಎದ್ದು ಕಾಣುವಂತೆ ಅಳವಡಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.