×
Ad

ಮಲ್ಪೆ: ಉರುಳಿ ಬಿದ್ದ ಟ್ಯಾಂಕರ್; ಕ್ಲೀನರ್ ಸ್ಥಳದಲ್ಲೇ ಮೃತ್ಯು

Update: 2024-02-08 22:24 IST

ಮಲ್ಪೆ: ಮಲ್ಪೆ ಬಂದರಿಗೆ ನೀರು ಸರಬರಾಜು ಮಾಡುವ ಟ್ಯಾಂಕರ್ ಒಂದು ಬುಧವಾರ ರಾತ್ರಿ 11:30ರ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಎಂಟು ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ ಅದರಲ್ಲಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.

ಜನಾರ್ದನ್ ಮೃತ ಕ್ಲೀನರ್ ಆಗಿದ್ದು, ಗಾಯಾಳು ಚಾಲಕ ಸುಜಿತ್‌ರನ್ನು ಈಶ್ವರ್ ಮಲ್ಪೆ ಅವರು ಕೆಎಂಸಿ ಮಣಿಪಾಲಕ್ಕೆ ಸೇರಿಸಿದ್ದಾರೆ. ಕೊಡವೂರಿನ ವೀಣಾ ಎಂಬವರ ಹೆಸರಿನಲ್ಲಿರುವ ಟ್ಯಾಂಕರ್ ಮಲ್ಪೆ ಬಂದರಿಗೆ ನೀರು ಸರಬರಾಜು ಮಾಡುತ್ತಿತ್ತು.

ಅದರಂತೆ ರಾತ್ರಿ 11ಗಂಟೆ ಸುಮಾರಿಗೆ ಮಲ್ಪೆ ಬಂದರಿನಿಂದ ಭಾಸ್ಕರ ಪಾಲನ್ ಎಂಬವರ ಮನೆ ಬಾವಿಯಿಂದ ನೀರು ತುಂಬಿಸಿಕೊಂಡು ಬರಲು ಹೋಗುತಿದ್ದಾಗ ಈ ಘಟನೆ ನಡೆದಿದೆ. ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕ್ಲೀನರ್ ಹಾಗೂ ಚಾಲಕರಿಬ್ಬರೂ ಟ್ಯಾಂಕರ್ ಅಡಿಯಲ್ಲಿ ಸಿಲುಕಿದ್ದು ಸ್ಥಳೀಯರು ಟ್ಯಾಂಕರ್‌ನ್ನು ಮೇಲಕ್ಕೆತ್ತಿ ಇಬ್ಬರನ್ನೂ ಹೊರಗೆಳೆದಿದ್ದರು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News