×
Ad

ಉಡುಪಿ : ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿ ವಂಚನೆ; ಪ್ರಕರಣ ದಾಖಲು

Update: 2024-02-14 22:18 IST

ಉಡುಪಿ, ಫೆ.14: ಕೆನರಾ ಬ್ಯಾಂಕ್‌ನ ಖಾತೆದಾರರೊಬ್ಬರ ಗಮನಕ್ಕೆ ಬಾರದೇ ಖಾತೆಯಿಂದ 1.25 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲತಾ (64) ಎಂಬುವವರಿಗೆ 2 ವಾರದಿಂದ ಮೊಬೈಲ್ ಫೋನ್‌ಗೆ ಅಪರಿಚಿತ ವ್ಯಕ್ತಿಗಳ ಮೆಸೇಜ್, ಕಾಲ್ ಬರುತ್ತಿದ್ದು, ಫೆ.13ರಂದು ಸಂಜೆ ಕೆನರಾ ಬ್ಯಾಂಕ್‌ಗೆ ಹೋಗಿ ಅಲ್ಲಿದ್ದ ಕೆನರಾ ಬ್ಯಾಂಕ್ ಆಫೀಸರ್ ಸಹಾಯದಿಂದ ಎಟಿಎಂ ಕಾರ್ಡ್ ಪಿನ್ ಕೋಡ್ ಮತ್ತು ಈ ಮೇಲ್ ಅಡ್ರೆಸ್‌ಯನ್ನು ಬದಲಾಯಿಸಿಕೊಂಡಿದ್ದರು. ಆದರೂ ಲತಾ ಅವರು ಮನೆಯಲ್ಲಿದ್ದಾಗ ಅವರ ಗಮನಕ್ಕೆ ತಾರದೇ ಅವರ ಖಾತೆಯಿಂದ 1.25 ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ಲತಾ ಅವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News