×
Ad

ಕೋಡಿಸಮುದ್ರ ತೀರದಲ್ಲಿ ಯುವಕನ ಮೃತದೇಹ ಪತ್ತೆ; ಆತ್ಮಹತ್ಯೆ ಶಂಕೆ

Update: 2024-02-17 22:00 IST

ಕುಂದಾಪುರ: ತಾಲೂಕಿನ ಕೋಡಿ ಚಕ್ರೇಶ್ವರಿ ದೇವಸ್ಥಾನದ ಎದುರು ಸಮುದ್ರ ತೀರದಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಫೆ.17ರಂದು ಬೆಳಿಗ್ಗೆ ವರದಿಯಾಗಿದೆ.

ಅಮಾಸೆಬೈಲು ರಟ್ಟಾಡಿ ಮೂಲದ ಪ್ರಸಾದ್ ಕೆ. (24) ಮೃತ ಯುವಕ.

ಪ್ರಸಾದ್ ಕರ್ನಾಟಕ ಬ್ಯಾಂಕ್ ರಾಮನಗರ ಜಿಲ್ಲೆಯ ಕನಕಪುರ ಶಾಖೆ ಯಲ್ಲಿ ಫೀಲ್ಡ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿ ಕೊಂಡಿದ್ದು, ಫೆ.16ರಂದು ಆತನ ಮೊಬೈಲ್‌ಗೆ ತಾಯಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಪ್ ಆಗಿತ್ತು. ಆತನು ಕೆಲಸ ಮಾಡಿಕೊಂಡಿದ್ದ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ಕೇಳಿದಾಗ ಪ್ರಸಾದ್ ಬೆಳಗ್ಗೆ 11 ಗಂಟೆವರೆಗೆ ಕರ್ತವ್ಯದಲ್ಲಿದ್ದು ನಂತರ ಬೇರೆ ಬ್ರಾಂಚ್‌ಗೆ ವಿಸಿಟ್ ಮಾಡುವುದಾಗಿ ತೆರಳಿದ್ದಾಗಿ ತಿಳಿಸಿದ್ದರು.

ಆದರೆ ಫೆ.17ರಂದು ಬೆಳಗ್ಗಿನ ಜಾವ ಸ್ಥಳೀಯರು ಕರೆಮಾಡಿ ಪ್ರಸಾದ್‌ ನ ಮೃತ ದೇಹವು ಕುಂದಾಪುರ ತಾಲೂಕು ಕೋಡಿ ಸಮೀಪದ ಸಮುದ್ರದ ದಡದಲ್ಲಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News