ಮಲ್ಪೆ: ಬೋಟ್ ನಿಂದ ನೀರಿಗೆ ಬಿದ್ದು ವ್ಯಕ್ತಿ ಮೃತ್ಯು
Update: 2024-02-21 22:28 IST
ಮಲ್ಪೆ: ಇಲ್ಲಿನ ಕೊತ್ವಾಲ್‌ಸಿಂಗ್ ಹೆಸರಿನ ಬೋಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ರಾಮನಾಥಪುರಂ ಮೂಲಕ ಕಮೇಗಂ (52) ಎಂಬ ಮೀನುಗಾರರು ಫೆ.19ರ ರಾತ್ರಿ ಬೋಟ್‌ನಲ್ಲಿ ಮಲಗಿದ್ದವರು ರಾತ್ರಿಯ ವೇಳೆ ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಮಲ್ಪೆಯ ಮುಳುಗು ತಜ್ಞ ಈಶ್ವರ ಮಲ್ಪೆ ಅವರು 20ರಂದು ಬೆಳಗ್ಗೆ 7 ಗಂಟೆಗೆ ಕಮೇಗಂರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದರು. ಅವರು ರಾತ್ರಿ ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಪ್ರಕರಣ ದಾಖಲಿಸಿ ಕೊಂಡಿರುವ ಮಲ್ಪೆ ಪೊಲೀಸರು ತಿಳಿಸಿದ್ದಾರೆ.