ಕೊಲ್ಲೂರು: ಬಾವಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತ್ಯು
Update: 2024-06-29 17:22 IST
ಕೊಲ್ಲೂರು, ಜೂ.29: ಇಬ್ಬರು ವಿದ್ಯಾರ್ಥಿಗಳು ಮನೆಯ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಪಂಚಾಯತ್ ವ್ಯಾಪ್ತಿಯ ನಂದ್ರೋಳ್ಳಿ ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು ನಂದ್ರೋಳ್ಳಿ ನಿವಾಸಿ ಶೀಲಾ ಹಾಗೂ ಸತೀಶ್ ಮಡಿವಾಳ ಎಂಬವರ ಮಗ ಧನರಾಜ್(13) ಹಾಗೂ ಮಗಳು ಛಾಯ(7) ಎಂದು ಗುರುತಿಸಲಾಗಿದೆ.
ಇದೇ ವೇಳೆ ನೀರಿಗೆ ಬಿದ್ದ ತಾಯಿ ಶೀಲಾ(34) ಗಂಭೀರವಾಗಿ ಅಸ್ವಸ್ಥಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಕೊಲ್ಲೂರು ಪೊಲೀಸರು ಆಗಮಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.